ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು

Author : ಶಾಂತಪ್ಪ ಎನ್. ಡಂಬಳ

Pages 80

₹ 100.00




Year of Publication: 2011
Published by: ಚೇತನ ಪ್ರಕಾಶನ
Address: ಸರಸ್ವತಿಪುರ, ಗುಲಬರ್ಗಾ ವಿಶ್ವವಿದ್ಯಾಲಯ ಅಂಚೆ, ಕಲಬುರಗಿ-585106

Synopsys

ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು-ಲೇಖಕ ಡಾ. ಶಾಂತಪ್ಪ ಎನ್. ಡಂಬಳ ಅವರ ಕೃತಿ. ಲೇಖಕ ಸುರೇಂದ್ರಕುಮಾರ ಕೆರಮಗಿ ಅವರು ಬೆನ್ನುಡಿ ಬರೆದು ‘ನಾಟಕಕಾರರ ಬದುಕಿನ ಬೆಲೆಗಟ್ಟುವಿಕೆ, ನಾಟಕಗಳ ಮೌಲ್ಯ ವಿವೇಚನೆ, ಸಮಾಜದ ರೀತಿ-ನೀತಿಗಳು ಕೃತಿಯಲ್ಲಿ ಸಮರ್ಥವಾಗಿ ಬಿಂಬಿತವಾಗಿವೆ. ರಂಗಭೂಮಿಯ ಅನಂತ ಸಾಧ್ಯತೆಗಳನ್ನು ಸದುಪಯೋಗಪಡಿಸಿಕೊಂಡು ವೃತ್ತಿ ನಾಟಕಕಾರರ ಬದುಕು-ಬವಣೆ ಹಾಗೂ ಸಾಮಾಜಿಕ ಸ್ಥಿತಿ-ಗತಿಗಳಿಗೆ ಸ್ಪಂದಿಸುವ ವಿಷಯಗಳನ್ನು ಲೇಖಕರು ಸಂಗ್ರಹಿಸಿದ್ದಾರೆ’ ಎಂದು ಪ್ರಶಂಸಿಸಿದ್ದಾರೆ.

About the Author

ಶಾಂತಪ್ಪ ಎನ್. ಡಂಬಳ
(22 July 1972)

ಡಾ. ಶಾಂತಪ್ಪ ಎನ್. ಡಂಬಳ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ (ಜನನ: 22-07-1972) ತಾಲೂಕಿನ ಮಳ್ಳಿ ಗ್ರಾಮದವರು. ಕರ್ನಾಟಕ ವಿ.ವಿ.ಯಿಂದ ಬಿ.ಎ, ಗುಲಬರ್ಗಾ ವಿ.ವಿ.ಯಿಂದ ಸ್ನಾತಕೋತ್ತರ ಎಂ.ಎ, ಬಿ.ಈಡಿ, ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು: ಒಂದು ಅಧ್ಯಯ” ವಿಷಯವಾಗಿ ಎಂ.ಫಿಲ್,  ರಸ್ತಾಪುರದ ಭೀಮಕವಿ ಹಾಗೂ ಅವರ ಕೃತಿಗಳು: ಒಂದು ಅಧ್ಯಯನ’ ವಿಷಯವಾಗಿ ಪಿ.ಎಚ್.ಡಿ ಪಡೆದಿದ್ದಾರೆ.  ಕೃತಿಗಳು: ರಸ್ತಾಪೂರ ಭೀಮಕವಿ ವಿರಚಿತ ದೋರನಹಳ್ಳಿ ಶ್ರೀ ಮಹಾಂತೇಶ್ವರ ಪುರಾಣ (ಸಂಪಾದನೆ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಮದುವೆ: ಒಂದು ಜನಪದೀಯ ಅಧ್ಯಯನ, ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು, ರಸ್ತಾಪುರದ ಭೀಮಕವಿ (ಸಂಶೋಧನಾ ...

READ MORE

Related Books