ಡಾ. ಶಾಂತಪ್ಪ ಎನ್. ಡಂಬಳ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ (ಜನನ: 22-07-1972) ತಾಲೂಕಿನ ಮಳ್ಳಿ ಗ್ರಾಮದವರು. ಕರ್ನಾಟಕ ವಿ.ವಿ.ಯಿಂದ ಬಿ.ಎ, ಗುಲಬರ್ಗಾ ವಿ.ವಿ.ಯಿಂದ ಸ್ನಾತಕೋತ್ತರ ಎಂ.ಎ, ಬಿ.ಈಡಿ, ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು: ಒಂದು ಅಧ್ಯಯ” ವಿಷಯವಾಗಿ ಎಂ.ಫಿಲ್, ರಸ್ತಾಪುರದ ಭೀಮಕವಿ ಹಾಗೂ ಅವರ ಕೃತಿಗಳು: ಒಂದು ಅಧ್ಯಯನ’ ವಿಷಯವಾಗಿ ಪಿ.ಎಚ್.ಡಿ ಪಡೆದಿದ್ದಾರೆ.
ಕೃತಿಗಳು: ರಸ್ತಾಪೂರ ಭೀಮಕವಿ ವಿರಚಿತ ದೋರನಹಳ್ಳಿ ಶ್ರೀ ಮಹಾಂತೇಶ್ವರ ಪುರಾಣ (ಸಂಪಾದನೆ), ರಸ್ತಾಪುರ ಭೀಮಕವಿಯ ಹಾಲುಮತೋತ್ತೇಜಕ ಪುರಾಣ, ಮದುವೆ: ಒಂದು ಜನಪದೀಯ ಅಧ್ಯಯನ, ಗುಲಬರ್ಗಾ ಜಿಲ್ಲೆಯ ವೃತ್ತಿ ನಾಟಕಕಾರರು, ರಸ್ತಾಪುರದ ಭೀಮಕವಿ (ಸಂಶೋಧನಾ ಮಹಾಪ್ರಬಂಧ), ಶಂಕರ ಕೈವಲ್ಯ ಕಲ್ಪದ್ರುಮ (ಸಂಪಾದನೆ), ಚರಬಸವೇಶ್ವರ ಪುರಾಣ (ಸಂಪಾದನೆ), ಮಡಿವಾಳ ಮಾಚೀದೇವ ಪುರಾಣ (ಸಂಪಾದನೆ), ರಸ್ತಾಪುರ ಭೀಮಕವಿ (ಜೀವನ ಚರಿತ್ರೆ), ವಿವಿಧ ಲೇಖಕರ-ಸಾಹಿತಿಗಳ ಅಭಿನಂದನಾ ಗ್ರಂಥದಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ವಿವಿಧ ವಿಚಾರ ಸಂಕಿರಣ, ಕಮ್ಮಟ, ಶಿಬಿರಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.