ವೃಂದಾವನ ವ್ಯಕ್ತಿಚಿತ್ರಗಳು

Author : ರೋಹಿತ್ ಚಕ್ರತೀರ್ಥ

Pages 128

₹ 120.00




Year of Publication: 2020
Published by: ಅಯೋಧ್ಯಾ ಬುಕ್ಸ್
Address: 1571, 36ನೇ ಕ್ರಾಸ್, ಡಾ. ಪುನೀತ್ ರಾಜಕುಮಾರ್ ರೋಡ್, ಬನಶಂಕರಿ 2ನೇ ಹಂತ, ಬೆಂಗಳೂರು, ಕರ್ನಾಟಕ 560070
Phone: 096209 16996

Synopsys

‘ವೃಂದಾವನ ವ್ಯಕ್ತಿಚಿತ್ರಗಳು’ ಕೃತಿಯು ರೋಹಿತ್ ಚಕ್ರತೀರ್ಥ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ನಮಗೆ ದಾರಿದೀಪವಾಗಬಲ್ಲ ಹಲವಾರು ವ್ಯಕ್ತಿಗಳ ಜೀವನದ ಕತೆ. ಲೇಖಕರೇ ಹೇಳಿದಂತೆ ವೃಂದಾವನವು ಸತ್ತವರ ಕತೆಗಳಲ್ಲ. ಚರಿತ್ರೆಯ ಪುಟಗಳಲ್ಲಿ ಶಾಶ್ವತವಾಗಿ ತಮ್ಮ ಹೆಸರನ್ನು ಕೆತ್ತಿದವರ ಕತೆ. ಇದರಲ್ಲಿರುವ ಪ್ರತಿಯೊಂದು ಮಹಾನ್ ವ್ಯಕ್ತಿಗಳ ಕಥೆಯನ್ನು ಓದುತ್ತಿದ್ದಂತೆ ಆ ಕಾಲದಲ್ಲಿಯೂ ಹಲವು ಅಡೆತಡೆ, ಕಷ್ಟಗಳನ್ನು ಮೆಟ್ಟಿನಿಂತು ಸಾಧಿಸಿದ ಬಗೆ ಆಶ್ಚರ್ಯವನ್ನುಂಟುಮಾಡುತ್ತದೆ. ಶೇಕ್ಸ್ ಪಿಯರ್ ಗಿಂತಲೂ ಮುನ್ನೂರು ವರ್ಷಗಳ ಹಿಂದೆ ಕನ್ನಡದಲ್ಲಿ ಉತ್ಕೃಷ್ಟ ಸಾಹಿತ್ಯ ಕೊಟ್ಟ ಕುಮಾರವ್ಯಾಸರ ಬಗ್ಗೆ ಓದುತ್ತಾ ನಮ್ಮ ಭಾಷೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಲೀಲಾಶುಕನೆಂಬ ಕವಿಯ ಬಗ್ಗೆ ನಮಗೆ ಹೆಚ್ಚಾಗಿ ತಿಳಿದಿಲ್ಲ.  ಲೀಲಾಶುಕನ ಕೃಷ್ಣಕರ್ಣಾಮೃತ ವನ್ನು ಸವಿಯುವ ಬಯಕೆಯಾಗುತ್ತದೆ. ಹಂಪೆಯ ನವಬೃಂದಾವನದಲ್ಲಿರುವ ಶ್ರೀ ವ್ಯಾಸರಾಜರ ವೃಂದಾವನವನ್ನು ಅಗೆದ ಕಿಡಿಗೇಡಿಗಳು ನಮ್ಮ ಇತಿಹಾಸವನ್ನು ಬಗೆದಿದ್ದರೆ ವ್ಯಾಸರಾಯರೇ ಒಂದು ನಿಧಿ ಎಂದು ಅರಿವಾಗುತ್ತಿತ್ತು ಎನ್ನುವ ಲೇಖಕರ ಮಾತು ಎಷ್ಟು ಸತ್ಯವಲ್ಲವೇ? ಬದುಕುವುದೇ ಇಲ್ಲವೆಂದು ಕೊಂಡಿದ್ದ, ಮೂಳೆ ಚಕ್ಕಳವಾಗಿದ್ದ ಹುಡುಗನೊಬ್ಬ ಬೆಳೆದು ಯೋಗ ಜಗತ್ತಿನಲ್ಲಿ ಮಹಾನ್ ಹೆಸರು ಪಡೆದ ಬಿಕೆಎಸ್ ಅಯ್ಯಂಗಾರ್ ಅವರ ಕಥೆಯನ್ನು ಒಮ್ಮೆ ಓದಬೇಕು. ತನ್ನ ಅನಾರೋಗ್ಯವನ್ನು ಯೋಗಾಸನಗಳಿಂದಲೇ ಗೆದ್ದು ವಿದೇಶಿಯರಿಗೆ ಕೂಡ ಯೋಗದ ಮಹತ್ವವನ್ನು ಸಾರಿದ ಅಯ್ಯಂಗಾರರು, ಜಿಡ್ಡು ಕೃಷ್ಣಮೂರ್ತಿ, ಸಚಿನ್ ತೆಂಡೂಲ್ಕರ್, ಬೆಲ್ಜಿಯಂನ ರಾಣಿ ಎಲಿಜಬೆತ್ ಮೊದಲಾದವರಿಗೆ ಯೋಗ ಗುರುವಾಗಿದ್ದರು. ಆಲೂರು ವೆಂಕಟರಾಯರು, ಟಿ ಪಿ ಕೈಲಾಸಂ, ರಾಮಚಂದ್ರ ದೇಶಪಾಂಡೆ, ಹಟ್ಟಿಯಂಗಡಿ ನಾರಾಯಣರಾಯರು, ಗರಳಪುರಿ ಶಾಸ್ತ್ರಿಗಳು, ವೆಂಕಟಾಚಾರ್ಯರು, ಚಾಮರಾಜೇಂದ್ರ ಒಡೆಯರ್, ಸಿದ್ದಗಂಗಾ ಶ್ರೀಗಳು, ಪಿವಿ ನರಸಿಂಹ ರಾವ್ ಮೊದಲಾದ ಹಲವಾರು ಮಹಾಪುರುಷರ ಬದುಕಿನ ಕಥೆ ಇದರಲ್ಲಿದೆ. ಇವರೆಲ್ಲರ ಬದುಕಿನ ಕಥೆಗಳು ಖಂಡಿತವಾಗಿಯೂ ನಾವೆಲ್ಲರೂ ಅರಿತಿರಬೇಕಾದದ್ದು. ಕಷ್ಟಗಳ ಜೊತೆ ಜೊತೆಗೇ ಹೆಜ್ಜೆ ಹಾಕಿ ಸಾಧಿಸಿದ ಅವರೆಲ್ಲರೂ ನಮಗೆ ಸ್ಫೂರ್ತಿ ದೀಪಗಳೇ ಆಗಿದೆ’ ಎಂದು ವಿಶ್ಲೇಷಿಸಿದ್ದಾರೆ.

About the Author

ರೋಹಿತ್ ಚಕ್ರತೀರ್ಥ

ರೋಹಿತ್ ಚಕ್ರತೀರ್ಥ, ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕರಾಗಿ ಕಾಲೇಜುಗಳಲ್ಲಿ ಪಾಠ ಮಾಡಿ, ಈಗ ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ.  ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡು, ಹಲವು ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ. ಜೊತೆಗೆ ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಸೇರಿದಂತೆ ಹಲವು ಪ್ರಕಾರಗಳಲ್ಲಿ ಇದುವರೆಗೆ 13 ಪುಸ್ತಕಗಳು ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಹವ್ಯಾಸ., ...

READ MORE

Related Books