ಕಸ್ತೂರ್ ಬಾ ಹಾಗೂ ಮಹಾತ್ಮ ಗಾಂಧಿ ಅವರ ವ್ಯಕ್ತಿಗತ ಹಾಗೂ ಸಾಮಾಜಿಕ ವ್ಯಕ್ತಿತ್ವಗಳ ವಿವಿಧ ಆಯಾಮಗಳನ್ನು ತೋರುವ ಕೃತಿ-ಕಸ್ತೂರ್ ಬಾ v/s ಗಾಂಧಿ. ಪ್ರತಿಯೊಬ್ಬರಿಗೂ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವಗಳಿರುತ್ತವೆ. ಅವರು ಪಡೆದ ಶಿಕ್ಷಣ, ಬೆಳೆದ ಪರಿಸರ ಹಾಗೂ ಅಳವಡಿಸಿಕೊಂಡ ಸಂಸ್ಕೃತಿ ಇತ್ಯಾದಿ ಅಂಶಗಳು ಆ ವ್ಯಕ್ತಿತ್ವವನ್ನು ರೂಪಿಸುತ್ತವೆ. ಮಹಾತ್ಮ ಗಾಂಧಿ ಅವರ ನಡೆ ಎಷ್ಟೇ ಆಕ್ಷೇಪಾರ್ಹ ವಾಗಿದ್ದರೂ ಸತಿಯಾಗಿ ಕಸ್ತೂರ್ ಬಾ ಅವರು ಅದನ್ನು ಸ್ವೀಕರಿಸಿದ ರೀತಿ ಅನನ್ಯ ಹಾಗೂ ಮಾದರಿ. ಇಂತಹ ವ್ಯಕ್ತಿತ್ವದ ಸತಿಯನ್ನು ತಮ್ಮೆಲ್ಲ ಸಾಮಾಜಿಕ ಒತ್ತಡಗಳೊಂದಿಗೆ ಸಹಿಸಿದ ಮಹಾತ್ಮಗಾಂಧಿ, ಹೀಗೆ ತೌಲನಿಕ ಅಧ್ಯಯನಕ್ಕೆ ಈ ಕೃತಿ ಹತ್ತು ಹಲವು ಅವಕಾಶಗಳನ್ನು, ಒಳನೋಟದ ಹೊಳವುಗಳನ್ನು ನೀಡುತ್ತದೆ. ಪರಸ್ಪರ ವಿರುದ್ಧವಾದ ವ್ಯಕ್ತಿತ್ವವಿದ್ದರೂ ಅದನ್ನು ತೋರುಗೊಡದೇ ಸಂಸಾರ ಧರ್ಮ ನಿರ್ವಹಿಸುವ ಸಂಕಲ್ಪ, ಮನೋಸ್ಥೈರ್ಯವನ್ನು ಸಹ ಇಲ್ಲಿ ಅಧ್ಯಯನ ಯೋಗ್ಯವೇ ಆಗಿದೆ. ಎರಡು ವ್ಯಕ್ತಿತ್ವಗಳನ್ನು ಒಂದೇ ಚೌಕಟ್ಟಿನಡಿ ತಂದು ಪರಿಚಯಿಸುವ ಅಧ್ಯಯನ ಯೋಗ್ಯ ಕೃತಿ.
©2024 Book Brahma Private Limited.