ಕರ್ನಾಟಕದ ಗಂಧರ್ವರು

Author : ಶಿರೀಷ ಜೋಶಿ

Pages 117

₹ 100.00




Year of Publication: 2008
Published by: ಅಲ್ಲಮಪ್ರಭು ಜನಕಲ್ಯಾಣ ಸಂಸ್ಥೆ
Address: ಸಿದ್ಧಸಂಸ್ಥಾನ ಮಠ, ಚಿಂಚಣಿ -591272, ಚಿಕ್ಕೋಡಿ ತಾಲೂಕು, ಬೆಳಗಾವಿ ಜಿಲ್ಲೆ
Phone: 18338272265

Synopsys

‘ಕರ್ನಾಟಕದ ಗಂಧರ್ವರು’ ಕೃತಿಯು ಶಿರೀಷ ಜೋಶಿ ಅವರ ಕೃತಿ. ಈ ಕೃತಿಗೆ ಬೆನ್ನುಡಿ ಬರೆದಿರುವ ಎಸ್. ವಿದ್ಯಾಶಂಕರ, ‘ಗಂಧರ್ವರಲ್ಲಿ ದೇವ ಗಂಧರ್ವ ಹಾಗೂ ಮರ್ತೃ ಎಂದು ಎರಡು ವಿಧ. ದೇವ ಗಂಧರ್ವರು ಸೃಷ್ಟಿ ಪ್ರಾರಂಭದಲ್ಲಿಯೇ ಇದ್ದವರು. ಮರ್ತ್ಯ ಗಂಧರ್ವರು ಈ ಸೃಷ್ಟಿಯಲ್ಲಿ ಮನುಷ್ಯರಾಗಿ ಜನಿಸಿದ ಮೇಲೆ ಪುಣ್ಯಾಯತ್ತದಿಂದ ಆ ಪದವಿ ಪಡೆದವರು. ‘ಕರ್ನಾಟಕದ ಗಂಧರ್ವರು’ ಎಂಬ ಶಿರೀಷ ಜೋಶಿಯವರ ಕೃತಿಯಲ್ಲಿ ಬರುವ ಸವಾಯಿ ಗಂಧರ್ವ ಹಾಗೂ ಕುಮಾರ ಗಂಧರ್ವರು, ಗಂಧರ್ವ ಪದವಿಯಿಂದ ಖ್ಯಾತರಾದವರು; ಕರ್ನಾಟಕದಲ್ಲಿ ಜನಿಸಿದವರು. ಈ ಕೃತಿಯಲ್ಲಿ ಬರುವ ಪಂಚಾಕ್ಷರಿ ಗವಾಯಿಗಳು, ಪಂ. ಮಲ್ಲಿಕಾರ್ಜುನ ಮನ್ಸೂರ, ಡಾ. ಗಂಗೂಬಾಯಿ ಹಾನಗಲ್ಲ, ಪಂ. ಭೀಮಸೇನ ಜೋಶಿ ಹಾಗೂ ಪಂ. ಬಸವರಾಜ ರಾಜಗುರು ಅವರು ‘ಗಂಧರ್ವ ರೆಂದು ಖ್ಯಾತರಾಗದಿದ್ದರೂ ತಮ್ಮ ಅವಿರತ ಸಾಧನೆಯಿಂದ ಸಂಗೀತ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿರುವ, ಕರ್ನಾಟಕಕ್ಕೆ ಹೆಸರು ತಂದಿರುವ ಮಹಾನ್ ಕಲಾವಿದರು. ಪುಣ್ಯಾಯತ್ತದಿಂದ ‘ಗಂಧರ್ವ’ ಪದವಿ ಪಡೆಯಲಾಗುವುದಾದರೆ ಈ ಮೇಲಿನ ಐವರೂ ಆ ಪದವಿಗೆ ಯಾವ ವಿಧದಲ್ಲೂ ಕಡಿಮೆಯವರಲ್ಲ. ಆ ಕಾರಣದಿಂದಲೇ, ಶಿರೀಷ ಜೋಶಿ, ಇವರನ್ನು ಗಂಧರ್ವರೆಂದೇ ಕರೆದಿರುವುದು. ಇಲ್ಲಿ ಚಿತ್ರಿಸಲಾಗಿರುವ ಸಂಗೀತ ಲೋಕದ ದಿಗ್ಗಜರ ಬದುಕಿನ ಸಾಧನೆ-ಸಿದ್ದಿಗಳ ಮನೋಜ್ಞ ಪರಿಚಯ ಆತ್ಮೀಯ ನೆಲೆಯಲ್ಲಿದೆ. ಒಬ್ಬೊಬ್ಬರದೂ ಅಪೂರ್ವ ದಾಖಲೆಗಳು. ಇವರು ಸಂಗೀತದ ಮೇರುಶಿಖರಗಳು; ಕರ್ನಾಟಕದ ಅಪೂರ್ವ ರತ್ನಗಳು’ ಎಂದಿದೆ.

About the Author

ಶಿರೀಷ ಜೋಶಿ

ಕರ್ನಾಟಕ ಸರ್ಕಾರದ ಜಲ ಸಂಪನ್ಮೂಲ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿರೀಷ ಜೋಶಿ ಅವರು ಸಂಗೀತಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಬರೆಯುವ ಕೆಲವೇ ಲೇಖಕರಲ್ಲಿ ಒಬ್ಬರು. ಬೆಳಗಾವಿ ನಿವಾಸಿ ಆಗಿರುವ ಶಿರೀಷ ಅವರು ಸಾಹಿತ್ಯ, ಸಂಗೀತ, ನಾಟಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಂಗೀತದ ಪ್ರೀತಿ ಅವರಿಂದ ಹಲವು ಪುಸ್ತಕಗಳನ್ನು ಬರೆಸಿದೆ. ಕೃತಿಗಳು: ಕುಮಾರ ಗಂಧರ್ವ, ಬಸವರಾಜ ರಾಜಗುರು, ಕರ್ನಾಟಕದ ಗಂಧರ್ವರು, ಸಂಗೀತ ಲೋಕದ ರಸನಿಮಿಷಗಳು, ಕುಮಾರ ಸಂಗೀತ  ...

READ MORE

Related Books