ದೇಶವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲು ಕೇವಲ ರಾಜಕೀಯ ಮಾತ್ರ ಮಾನದಂಡವಲ್ಲ; ಆ ದೇಶದ ಸಾಂಸ್ಕೃತಿಕ-ಸಾಮಾಜಿಕ-ಸಾಹಿತ್ಯಕ-ಶೈಕ್ಷಣಿಕ ಹಿನ್ನೆಲೆ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಲೇಖಕ ಅ.ನ.ಕೃಷ್ಣರಾಯರು 16 ಜನ ಕಲಾವಿದರನ್ನು ಪರಿಚಯಿಸಿದ ಕೃತಿ-ಕರ್ನಾಟಕದ ಕಲಾವಿದರು.
ಒಂದು ದೇಶದ ಸಂಸ್ಕೃತಿಯನ್ನು ರಾಜಕೀಯದ ಕಣ್ಣುಗಳಿಂದ ನೋಡುತ್ತಾ ಬರಲಾಗಿದೆ. ಇದು ಸಂಕುಚಿತ ಮನಸ್ಸಿನ ಲಕ್ಷಣ. ವ್ಯಕ್ತಿ-ಸಮಾಜ-ಜನಾಂಗಳ ಸರ್ವತೋಮುಖ ಅಭಿವೃದ್ಧಿಯನ್ನು ಸಂಸ್ಕೃತಿ ಬಯಸುತ್ತದೆ. ನೈಸರ್ಗಿಕ ಬೆಳೆಯನ್ನು ಪರಂಪರೆಯ ಅನುಸರಣೆಯಿಂದಾಗಲಿ, ಪರದೇಶದ ಅನುಕರಣೆಯಿಂದಾಗಲಿ ತಡೆಗಟ್ಟುವುದು ಪರಮದ್ರೋಹವಾಗುತ್ತದೆ ಎಂದು ಕೃತಿಯ ಪ್ರಸ್ತಾವನೆಯಲ್ಲಿ ಲೇಖಕರು ಸ್ಪಷ್ಟಪಡಿಸಿದ್ದಾರೆ.
ಸಂಗೀತ ರತ್ನರಾದ ಮಲ್ಲಿಕಾರ್ಜುನ ಮನ್ಸೂರು, ಡಿ. ಸುಬ್ಬರಾಮಯ್ಯ., ವೈಣಿಕ ಪ್ರವೀಣ ವೆಂಕಟಗಿರಿಯಪ್ಪ, ಚಿತ್ರಕಾರ ಕಮಡೊಳಿ, ವೀಣೆ ಕೇಶವಮೂರ್ತಿ, ನಾಟಕ ಶಿರೋಮಣಿ ಎ.ವಿ. ವರದಾಚಾರ್ಯ, ಆಸ್ಥಾನ ವಿದ್ವಾನ್ ಎಂ. ರಾಮಾರಾಯರು, ವೀಣೆ ರಾಜಾರಾಯರು, ನಾಟಕ ರತ್ನ ಗುಬ್ಬಿ ವೀರಣ್ಣನವರು, ನಟಶೇಖರ ಮಹಮ್ಮದ್ ಪೀರ್, ಗಾಯನಾಚಾರ್ಯ ರಾಮಕೃಷ್ಣ ಬುವಾ ವಝೆ ಸೇರಿದಂತೆ ಒಟ್ಟು 16 ಜನ ಕಲಾವಿದರ ಸಾಹಿತ್ಯಕ-ಸಂಗೀತ-ಕಲೆಗಳ ಸಾಧನೆಯನ್ನು ಅಕ್ಷರ ರೂಪಕ್ಕೆ ಇಳಿಸಲಾಗಿದೆ.
©2024 Book Brahma Private Limited.