ಜೆ. ಎಸ್. ಖಂಡೇರಾವ್

Author : ಕುಪ್ಪಣ್ಣ ಕಂದಗಲ್

Pages 36

₹ 35.00




Year of Publication: 1999
Published by: ಕರ್ನಾಟಕ ಲಲಿತಕಲಾ ಅಕಾಡೆಮಿ
Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002

Synopsys

ಕಲಾವಿದ ಜೆ. ಎಸ್. ಖಂಡೇರಾವ್ ಅವರ ಜೀವನ ಚರಿತ್ರೆಯನ್ನು ಕುಪ್ಪಣ್ಣ ಕಂದಗಲ್ ಅವರು ರಚಿಸಿದ್ದಾರೆ. ಮಾನವೀಯತೆಯ ಮೂರ್ತಿವೆತ್ತಂತಿದ್ದ ಕಲಾವಿದ ಖಂಡೇರಾವ್ ಅವರು ಸರಳತೆ ಮತ್ತು ಸೌಜನ್ಯಕ್ಕೆ ಹೆಸರಾದವರು. ಸೌಮ್ಯ ಸ್ವಭಾವದ ಖಂಡೇರಾವ್ ಅವರಲ್ಲಿ ಅಗಾಧವಾದ ಕಲಾಪ್ರತಿಭೆ ಇದೆ. ಅಸಾಧಾರಣ ಕಲಾ ಸಾಮರ್ಥ್ಯ ಹೊಂದಿದ ಅವರು ಕೀರ್ತಿ ಮತ್ತು ಸ್ಥಾನಮಾನಗಳನ್ನು ಅರಸಿ ಹೋದವರಲ್ಲವಾದರೂ ಕಲಾ ಕ್ಷೇತ್ರದಲ್ಲಿ ಅವರ ಹೆಸರು ಉನ್ನತ ಶ್ರೇಣಿಯಲ್ಲಿದೆ. ಅವರ ಕಲಾಬದುಕಿನ ವಿವಿಧ ಮಜಲುಗಳನ್ನ ಈ ಕೃತಿ ತೆರೆದಿಡುತ್ತದೆ.

About the Author

ಕುಪ್ಪಣ್ಣ ಕಂದಗಲ್

ಕಲಾವಿದ, ಲೇಖಕ ಕುಪ್ಪಣ್ಣ ಕಂದಗಲ್ ಅವರು ಕಲೆಗೆ ಸಂಬಂಧಿಸಿದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಕಲಾವಿದರ ಮಾಲಿಕೆಗಾಗಿ ಕಲಾವಿದ ಜೆ. ಎಸ್. ಖಂಡೇರಾವ್ ಅವರ ಜೀವನ ಚರಿತ್ರೆಯನ್ನು ರಚಿಸಿದ್ದಾರೆ. ...

READ MORE

Related Books