‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು’ ಲೇಖಕಿ ನೇಮಿಚಂದ್ರ ಅವರ ಕೃತಿ. ಇಂಗ್ಲಿಷಿನಲ್ಲಿ ಮೊತ್ತಮೊದಲ ಕಾದಂಬರಿ ಎಂದು ಘೋಷಿತವಾದ ಡೇನಿಯಲ್ ಡೀಪೋನ ರಾಬಿನ್ಸನ್ ಕ್ರೂಸೋಗೂ ಮೊದಲೇ ಮೂವತ್ತು ವರ್ಷಗಳಷ್ಟು ಹಿಂದೆಯೇ ಹದಿಮೂರು ಕಾದಂಬರಿಗಳನ್ನು ಬರೆದ ಪ್ರಥಮ ಸ್ತ್ರೀವಾದಿ ಲೇಖಕಿ ಮತ್ತು ಚಿಂತಕಿ ಆಫ್ರಾ ಬೆನ್.
ಮತದಾನದಂತಹ ಮೂಲಭೂತ ಹಕ್ಕುಗಳಿಗಾಗಿ 72 ವರ್ಷಗಳ ಕಾಲ ಹೋರಾಡಿದ ಅಮೆರಿಕಾದ ಸೆನೆಕಾ ಫಾಲ್ಸ್ ನ ಮಹಿಳೆಯರು 200 ವರ್ಷಗಳಿಗೂ ಹಿಂದೆ ಹುಟ್ಟಿ, ಗಂಡು ಉಡುಗೆ ತೊಟ್ಟು ಭಿಡೆ ಇಲ್ಲದೆ ಬದುಕಿ, ನೂರಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದು ಸ್ತ್ರೀ ವಿಮೋಚನೆಯ ಸ್ವರವೆತ್ತಿದ ಜಾರ್ಜ್ ಸ್ಯಾಂಡ್, ಮಿಲಿಟರಿ ಆಡಳಿತ ಅಂಧಕಾರದಲ್ಲಿ ಪ್ರಜಾಪ್ರಭುತ್ವದ ದೀವಟಿಗೆ ಹಿಡಿದು ಹೊರಟು, ಗೃಹಬಂಧನದಲ್ಲಿ 15 ವರ್ಷಗಳನ್ನೇ ಕಳೆದು, ಎರಡು ದಶಕಗಳ ಅಹಿಂಸಾತ್ಮಕ ಹೋರಾಟ ನಡೆಸಿ ಬಿಡುಗಡೆಯಾದ ಸಾನ್ ಸೂಕಿ, ಅಣ್ವಸ್ತ್ರಗಳ ತಯಾರಿಕೆ ನಿಲ್ಲಿಸಿ, ಎಂದು ಶ್ವೇತಭವನದ ಮುಂದೆ 20 ವರ್ಷಕ್ಕೂ ಮೀರಿ ಶಾಂತಿ ಕಾವಲು ಕುಳಿತ ಕೋನಿ, ನಾಜಿ ಜರ್ಮನಿಯಲ್ಲಿ ಹಿಟ್ಲರನ ವಿರುದ್ಧ ಪ್ರತಿಭಟಿಸಿದ ಮಹಿಳೆಯರು ಹೀಗೆ ಹಲವು ಗಟ್ಟಿಗಿತ್ತಿಯರ ಸ್ಫೂರ್ತಿದಾಯಕ ಜೀವನಚಿತ್ರಣವನ್ನು ನೇಮಿಚಂದ್ರ ಅವರು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.