‘ಗಣಿತಜ್ಞರು’ ಮಲ್ಲಿಕಾರ್ಜುನ ಯಾಳವಾರ ಅವರು ಸಂಗ್ರಹಿಸಿರುವ ಜೀವನ ಸಾಧನೆಗಳ ಮಾಹಿತಿ ನೀಡುವ ಕೃತಿಯಾಗಿದೆ. ಈ ಪುಸ್ತಕವು ಪ್ರಾಚೀನ ಗಣಿತಶಾಸ್ತ್ರಜ್ಞರ ಜೀವನ ಸಾಧನೆಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಅಂಕಗಣಿತ, ರೇಖಾಗಣಿತ, ಬೀಜಗಣಿತದಂತಹ ಕ್ಲಿಷ್ಟ ಗಣಿತ ಸೂತ್ರಗಳನ್ನು ತಮ್ಮದೇ ಆದ ರೀತಿಯಲ್ಲಿ ಮಂಡಿಸಿ ಇಂದಿನ ನಿಖರ ಮಾಹಿತಿಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಈ ವಿಜ್ಞಾನಿಗಳ ಸಾಧನೆ ಕಡಿಮೆಯದೇನೂ ಅಲ್ಲ ಎಂಬುದನ್ನು ಈ ಕೃತಿಯಲ್ಲಿ ತಿಳಿಸಲಾಗಿದೆ.
ಹೊಸತು- 2004-ಫೆಬ್ರವರಿ
ಈ ಪುಸ್ತಕವು ಪ್ರಾಚೀನ ಗಣಿತಶಾಸ್ತ್ರಜ್ಞರ ಜೀವನ ಸಾಧನೆಗಳ ಬಗ್ಗೆ ಮಾಹಿತಿ ಒದಗಿಸುತ್ತದೆ. ಅಂಕಗಣಿತ, ರೇಖಾಗಣಿತ, ಬೀಜಗಣಿತದಂತಹ ಕ್ಲಿಷ್ಟ ಗಣಿತ ಸೂತ್ರಗಳನ್ನು ತಮ್ಮದೇ ಆದ ರೀತಿಯಲ್ಲಿ ಮಂಡಿಸಿ ಇಂದಿನ ನಿಖರ ಮಾಹಿತಿಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಈ ವಿಜ್ಞಾನಿಗಳ ಸಾಧನೆ ಕಡಿಮೆಯದೇನೂ ಅಲ್ಲ. ತಮ್ಮ ಪಾಂಡಿತ್ಯದಿಂದ ಲೋಕದ ಗಮನ ಸೆಳೆದ ದೇಶವಿದೇಶಗಳ ಒಟ್ಟು ಹದಿನೇಳು ಮಂದಿ ಗಣಿತಜ್ಞರನ್ನು ಇಲ್ಲಿ ಪರಿಚಯಿಸಲಾಗಿದೆ. ಕೆಲವು ಪ್ರಮೇಯಗಳನ್ನು ನೀಡಲಾಗಿದ್ದು ವಿದ್ಯಾರ್ಥಿಗಳು ತಾಳೆ ನೋಡಬಹುದಾಗಿದೆ.
©2024 Book Brahma Private Limited.