ಎನ್ನೆಲ್ - ಎರಡು ಮುಖ

Author : ಉಮೇಶ್ ಕುಲಕರ್ಣಿ

Pages 94

₹ 70.00




Year of Publication: 2008
Published by: ಸುಚಿತ್ರಾ ಸಿನಿಮಾ ಮತ್ತು ಕಲ್ಚರಲ್ ಅಕಾಡೆಮಿ
Address: ನಂ. 36, 9ನೇ ಮುಖ್ಯರಸ್ತೆ, ಬಿ. ವಿ. ಕಾರಂತ ರಸ್ತೆ, ಬನಶಂಕರಿ 2ನೇ ಸ್ಟೇಜ್, ಬೆಂಗಳೂರು - 560070

Synopsys

‘ಎನ್ನೆಲ್ - ಎರಡು ಮುಖ’ ಪ್ರತಿಭಾವಂತ ನಿರ್ದೇಶಕ ಲಕ್ಷ್ಮೀನಾರಾಯಣ್ ಅವರ ವ್ಯಕ್ತಿ ಚಿತ್ರಣ ಕಟ್ಟಿಕೊಟ್ಟಿರುವ ಕೃತಿ. ಲೇಖಕ ಉಮೇಶ್‌ ಕುಲಕರ್ಣಿ ಅವರು ಈ ಕೃತಿಯನ್ನು ನಿರೂಪಿಸಿದ್ದಾರೆ. ನಾಂದಿ, ಉಯ್ಯಾಲೆ, ಮುಕ್ತಿ, ಬೆಟ್ಟದ ಹೂವು ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕನ್ನು ತೋರಿದ ಎನ್ನೆಲ್ ಅವರ ವ್ಯಕ್ತಿತ್ವ, ಮತ್ತು ಚಿತ್ರಗಳ ಸಂಪೂರ್ಣ ವಿವರಗಳೊಂದಿಗೆ ಅವರು ನಿಭಾಯಿಸುತ್ತಿದ್ದ ಚಾಕಚಕ್ಯತೆಯ ಬಗ್ಗೆ ವಿವರಿಸಿದ್ದಾರೆ.

About the Author

ಉಮೇಶ್ ಕುಲಕರ್ಣಿ

ಉಮೇಶ್ ಕುಲಕರ್ಣಿ ಅವರು ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಸಿನಿಮಾ ಸೇರಿದಂತೆ ಹಲವಾರು ವಿಚಾರಗಳ ಕುರಿತು ಅಧ್ಯಯನ ನಡೆಸಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೃತಿಗಳು: ಅಂಚೆ ಅಂಟು ಪರದೆ ನಂಟು ...

READ MORE

Reviews

ಪುಸ್ತಕ ಪರಿಚಯ: ಹೊಸತು-2009 ಏಪ್ರಿಲ್

ಮೂವತ್ತು ವರ್ಷಗಳ ಹಿಂದಿನ ಮಾತು. ನಾಂದಿ, ಉಯ್ಯಾಲೆ ಗಳಂಥ ಹೊಸ ಅಲೆಯ ಚಿತ್ರಗಳು ಪ್ರೇಕ್ಷಕನನ್ನು ಮೋಡಿ ಮಾಡಿದಂಥ ಸಮಯ. ಅಂದಿನ ಕೆಲವೇ ಪ್ರತಿಭಾವಂತ ಚಿತ್ರನಿರ್ದೇಶಕರಲ್ಲಿ ಲಕ್ಷ್ಮೀನಾರಾಯಣ್ ಪ್ರಮುಖರು. ಯಾವುದೇ ಮುಜುಗರವಿಲ್ಲದೆ ಮನೆಮಂದಿಯೆಲ್ಲ ಕೂತು ನೋಡಬಹುದಾದ ಚಿತ್ರಗಳನ್ನು ಎನ್ನೆಲ್ ನೀಡಿದ್ದಾರೆ. ಆರು ಚಿತ್ರಗಳನ್ನಷ್ಟೇ ಇವರು ನಿರ್ದೆಶಿಸಿದ್ದರೂ ಅವೆಲ್ಲವೂ ಹೆಸರುಗಳಿಸಿ, ಪ್ರೇಕ್ಷಕರಿಂದ ವಿಮರ್ಶಕರಿಂದ ಗುರುತಿಸಲ್ಪಟ್ಟಿವೆ. ಈ ಪುಸ್ತಕದಲ್ಲಿ ಎನ್ನೆಲ್ ಅವರ ವ್ಯಕ್ತಿ ಚಿತ್ರಣವಿದ್ದು, ಅವರ ಚಿತ್ರಗಳ ಸಂಪೂರ್ಣ ವಿವರ ಹಾಗೂ ನಿರ್ದೆಶನವನ್ನು ಅವರು ನಿಭಾಯಿಸುತ್ತಿದ್ದ ಚಾಕಚಕ್ಯತೆಯ ಬಗ್ಗೆ ಸಾಕಷ್ಟು ವಿಸ್ತಾರವಾಗಿ ಹೇಳಲ್ಪಟ್ಟಿದೆ.

Related Books