ಕರ್ನಾಟಕದ ಕಲಾವಿದರು ಇಡೀ ಭಾರತದ ಸಾಂಸ್ಕೃತಿಕ ವಾಹಕರೂ ಹೌದು. ಸಾಂಸ್ಕೃತಿಕ ಸಿರಿವಂತಿಕೆಯೂ ದೇಶದ ನೈಜ ಸಿರಿವಂತಿಕೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಸಾಹಿತ್ಯ, ಸಂಗೀತ, ನಾಟಕ, ನೃತ್ಯಕಲೆ, ಚಿತ್ರಕಲೆ, ಜನಪದಕಲೆ ಹೀಗೆ ವಿವಿದ ರಂಗಗಳಲ್ಲಿ ಜೀವ ತೇಯ್ದ ಮಹನೀಯರನ್ನು ಲೇಖಕ ಅ.ನ.ಕೃಷ್ಣರಾಯರು, ಅವರ ಸಾಧನೆಗಳೊಂದಿಗೆ ಗುರುತಿಸಿ, ಪರಿಚಯಿಸಿರುವುದು ‘ಕರ್ನಾಟಕದ ಕಲಾವಿದರು-ಭಾಗ-2' ರ ಹೆಗ್ಗಳಿಕೆ.
ಸೌಂದರ್ಯೋಪಾಸಕ ಮಿಣಜಗಿ, ದ್ವಾರಂ ವೆಂಕಟಸ್ವಾಮಿ ನಾಯ್ಡು, ಸಂಗೀತ ವಿದುಷಿ ನೀಲಮ್ಮ ಕಡಾಂಬಿ, ವೀಣೆ ನಾಗರಾಜ ರಾಯರು, ಸಂಗೀತ ವಿದುಷಿ ಚೊಕ್ಕಮ್ಮ, ಬಿ.ಟಿ. ರಾಜಪ್ಪ, ಸಿದ್ರಾಮಪ್ಪ, ಶಂಕರ ದೀಕ್ಷಿತ, ಉಭಯಕರ ಕೃಷ್ಣರಾವ್ ಸೇರಿದಂತೆ ಒಟ್ಟು 27 ಕಲಾವಿದರ ಸಾಧನೆಗಳೊಂದಿಗೆ ಪರಿಚಯವಿದೆ.
©2024 Book Brahma Private Limited.