ಗೀತಾ ನಾಗಭೂಷಣ

Author : ಚಿ.ಸಿ. ನಿಂಗಣ್ಣ

Pages 200

₹ 200.00




Year of Publication: 2023
Published by: ಶ್ರೀ ಸಿದ್ಧಲಿಂಗೇಶ್ವಠ ಪ್ರಕಾಶನ
Address: ಸರಸ್ವತಿ ಗೋದಾಮು, ಗುಲಬರ್ಗಾ 585101 \n
Phone: 08472 - 226303, 222431

Synopsys

ಡಾ. ಚಿ.ಸಿ. ನಿಂಗಣ್ಣ ರಚಿಸಿರುವ ‘ಗೀತಾ ನಾಗಭೂಷಣ’ ವಾಚಿಕೆ 10 ರ ಕುರಿತ ಸಮಗ್ರ ಸಾಹಿತ್ಯ ಈ ವಾಚಿಕೆಯಲ್ಲಿ ಅಡಕವಾಗಿದೆ. ಈ ವಾಚಿಕೆಯಲ್ಲಿ ಕಾದಂಬರಿ ಸಾಹಿತ್ಯ, ಕಥಾ ಸಾಹಿತ್ಯ, ಅನುಬಂಧ ಅನ್ನುವಂತಹ ಮೂರು ಭಾಗಗಳಿದೆ. ಗೀತಾ ನಾಗಭೂಷಣರ ಬರಹದಲ್ಲಿ ನಾವು ಮುಖ್ಯವಾಗಿ ಬರವಣಿಗೆಯಲ್ಲಿ ಬಳಸಬಹುದಾದ ಭಾಷೆಯ ಪ್ರಯೋಗ, ಸಮಕಾಲೀನ ಕಥೆ, ಹೊಸ ಪ್ರಯೋಗಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುವುದನ್ನು ಮನಗಾಣಬಹುದು. ಇಲ್ಲಿನ ಬರಹಗಳಲ್ಲಿ ಕೇಳಗೇರಿ ಜನರ ಭಾಷೆಯನ್ನು ಬಳಸಿದ್ದು, ಭಾಷೆಯ ಸೊಗಡು ಜೀವಂತವಾಗಿ ಮೂಡಿಬಂದಿದೆ. ಗೀತಾ ನಾಗಭೂಷಣರ ಒಟ್ಟು ಬರಹದಲ್ಲಿ ಕೆಳವರ್ಗದ ಮತ್ತು ಹಿಂದುಳಿದ ವರ್ಗಗಳ ಇಡೀ ಶೂದ್ರ ಸಮುದಾಯಗಳ ಬದುಕಿನ ಅಸಲಿ ತುಣುಕುಗಳು ಕತೆಯಾಗಿವೆ.

About the Author

ಚಿ.ಸಿ. ನಿಂಗಣ್ಣ

ಲೇಖಕ ಡಾ. ಸಿ. ಚಿ. ನಿಂಗಣ್ಣ ಅವರು ಮೂಲತಃ ಕಲಬುರಗಿಯವರು. ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪ್ರಥಮ ದರ್ಚೆಯಲ್ಲಿ ಪಡೆದರು. “ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ” ವಿಷಯವಾಗಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಮಹಾಪ್ರಬಂಧ ಸಲ್ಲಿಸಿ, ಪಿಎಚ್ ಡಿ ಪಡೆದರು. ಸದ್ಯ, ಕಲಬುರಗಿಯ  ಸಂತ ಜೋಸೆಫ್ ಪಿ.ಯು. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಕ.ಸಾ.ಪ. ಸಾಹಿತ್ಯ ಸಂಚಾಲಕರಾಗಿದ್ದು, ವಚನಸಾಹಿತ್ಯ, ಜಾನಪದ ಹಾಗೂ ವಿಮರ್ಶೆ ವಲಯದಲ್ಲಿ ವಿಶೇಷ ಆಸಕ್ತಿ. ಕೃತಿಗಳು: ಕಲಬುರಗಿ ಜಿಲ್ಲೆಯ ಜಾತ್ರೆಗಳು ಒಂದು ಜಾನಪದೀಯ ಅಧ್ಯಯನ (ಮಹಾಪ್ರಬಂಧ) ಕನ್ನಡ ವ್ಯಾಕರಣ, ಬಡವರ ಬಂಗಾರ, ಶಿವಾಜಿ, ಹಬ್ಬಗಳು, ಸ್ಪಂದನ, ಬಸವಣ್ಣನವರ ವಚನಗಳಲ್ಲಿ ಸಮಾಜೋಧಾರ್ಮಿಕ ಪ್ರಜ್ಞೆ ...

READ MORE

Related Books