ಎಫ್.ಟಿ.ಹಳ್ಳಿಕೇರಿ ಅವರು ಸಂಪಾದಿಸಿರುವ ಕೃತಿ ಲಕ್ಕಣ್ಣ ದಂಡೇಶ ಕವಿಯ ಶಿವತತ್ವ ಚಿಂತಾಮಣಿ. ಕುಲಪತಿ ಡಾ.ಸ.ಚಿ.ರಮೇಶ ಅವರು ಹೇಳುವಂತೆ, ಲಕ್ಕಣ್ಣ ದಂಡೇಶನ ಶಿವತತ್ವ ಚಿಂತಾಮಣಿಯು ಶಿವನ ಇಪ್ಪತ್ತೇಯದು ಲೀಲೆಗಳ ನಿರೂಪಣೆ, ಶಿವಶರಣರ-ಶಿವಭಕ್ತರ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಗಮನಸೆಳೆಯುವ ಒಂದು ಸಾಂಸ್ಕೃತಿಕ ಕೃತಿಯಾಗಿದ್ದು, ಕವಿ ತನ್ನ ಸಮಕಾಲೀನ ಶಿವಶರಣರು ಮತ್ತು ಶಿವಭಕ್ತರು ಕೈಗೊಂಡಿದ್ದ ಕಾಯಕಗಳನ್ನು ದಾಖಲಿಸಿದ್ದಾನೆ. ಇಂತಹ ಅಪರೂಪದ ಕೃತಿ ಅಧ್ಯಯನಕ್ಕೆ ಉಪಲಬ್ಧವಿರಲಿಲ್ಲ. ಈ ಕೊರತೆಯನ್ನು ಗಮನಿಸಿದ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರೊ. ಎಫ್.ಟಿ.ಹಳ್ಳಿಕೇರಿ ಅವರು ಹೊಸದಾಗಿ ದೊರೆತ ಹಸ್ತಪ್ರತಿಗಳ ನೆರವಿನಿಂದ ಪರಿಷ್ಕರಿಸಿದರು. ಉಪಯುಕ್ತವಾದ ಪ್ರಸ್ತಾವನೆಯಲ್ಲಿ ಲಕ್ಕಣ್ಣ ದಂಡೇಶ ಕವಿಯ ಇತಿವೃತ್ತ ವಿಚಾರ, ಶಿವತತ್ವ ಚಿಂತಾಮಣಿ ಕಾವ್ಯದ ಸ್ವರೂಪ, ಕಥಾಸಾರ, ಸಾಂಸ್ಕೃತಿಕ, ಚಾರಿತ್ರಿಕ ಮತ್ತು ಸಾಹಿತ್ಯಿಕ ಸಂಗತಿಗಳ ವಿಶ್ಲೇಷಣೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.
©2024 Book Brahma Private Limited.