‘ಮಳೆ ಮನೆಯ ಮಾತುಕತೆ’ ಶಿವಾನಂದ ಕಳವೆ ಅವರ ಸಂಶೋಧನಾ ಲೇಖನಗಳ ಸಂಕಲನ. ಮಲೆನಾಡು ಮಳೆಯ ತವರು. ಅಲ್ಲಿನ ಮಳೆಕಾಡು, ನಾಡಿಗೆ ನೀಡಿದ ನದಿಗಳು, ಜನಜೀವನದ ಜೀವಸೆಲೆ. ಕಾಡಿಗೂ ನೀರಿಗೂ ಇರುವ ನೇರ ಸಂಬಂಧಗಳ ದರ್ಶನಕ್ಕೆ ಊರೂರಿನ ಪ್ರತಿ ಗುಡ್ಡೆಗಳಲ್ಲಿ ಪ್ರಾತ್ಯಕ್ಷಿಕೆ, ನದಿ ಹುಟ್ಟಿದ್ದು, ತೊರೆ ಬತ್ತಿದ್ದು ಎಲ್ಲದಕ್ಕೂ ಗಮನಿಸಬಹುದಾದ ದೃಶ್ಯಗಳಿವೆ. ಮಳೆ, ಬಿರುಗಾಳಿಗಳೆಲ್ಲಾ ಖುದ್ದಾಗಿ ನೆಲದ ಮಕ್ಕಳಿಗೆ ಪಾಠ ಹೇಳಿವೆ. ದುರ್ಗಮ ಕಣಿವೆಯಲ್ಲಿ ರಾಜ್ಯಭಾರ ನಡೆಸಿದವರು. ದೇವಾಲಯ ಕಟ್ಟಿದವರು, ಕೃಷಿ ಚಿತ್ರ ಬರೆದವರೆಲ್ಲ ನೆಲಜಲ ಸಂರಕ್ಷಣೆಯ ಮಾದರಿ ರೂಪಿಸಿದ್ದಾರೆ. ನಾಡಿನ ನೀರ ನೆಮ್ಮದಿಗೆ ದಾರಿ ತೋರಿದ್ದಾರೆ. ಒಡ್ಡು ಕಟ್ಟುವುದು, ಕೆರೆ ತೋಡಿಸುವುದು, ಕಾಡು ಬೆಳೆಸುವ ವಿದ್ಯೆ ಹೇಳಿದ್ದಾರೆ. ಶಾಲೆ ಓದಿದ ನಮಗೆ ನೆಲದ ಮಾತು ಓದಲು ಪುರುಸೊತ್ತಿಲ್ಲದೆ ಓಡಿದ್ದೇವೆ. ಕಾಡನ್ನು ಕಡಿಸಿ, ಕೃಷಿಯಲ್ಲಿ ಸೋತು, ಕಟ್ಟಕಡೆಗೆ ಅಂತರ್ಜಲ ಭೇಟೆಯ ನೀರಿನ ಕನಸು ನನಸಾಗದೇ ಬಳಲಿದ್ದೇವೆ. ಗೆದ್ದು ಸೋಲುವ ಆಟ ಬೇಜಾರಾಗಿ ಇಂದು ಎಲ್ಲರ ಬದುಕು ನೀರಿನ ಸುಸ್ಥಿರ ದಾರಿ ಹುಡುಕುತ್ತಿದೆ . ಹಾಗಾಗಿ, ಹೃದಯ ಜೋಡಿಸುವ ಮೂಲಕ ಜಲ ಸಂರಕ್ಷಣೆಯ ಜನಜಾಗೃತಿ ನಡೆಯಬೇಕು. ಆ ನಿಟ್ಟಿನಲ್ಲಿ ಬರೆಯಲಾದ ಸಂಶೋಧನಾ ಲೇಖನ ಸಂಕಲನವೇ ’ಮಳೆ ಮನೆಯ ಮಾತುಕತೆ’.
ಶಿವಾನಂದ ಕಳವೆ ಅವರು ಶಿರ್ಸಿ ಬಳಿಯ ಕಳವೆ ಗ್ರಾಮದವರು. ವೃತ್ತಯಿಂದ ಪತ್ರಕರ್ತರು. ಪರಿಸರ ಜಾಗೃತಿ ಮೂಡಿಸುವ ಬರೆಹಗಳು ಇವರ ವೃತ್ತಿ ವೈಶಿಷ್ಟತೆ. ಶಿರಸಿ ಸಮೀಪದ ನೀರ್ನಳ್ಳಿಯ ‘ಮಲೆನಾಡ ಮಳೆಕೇಂದ್ರ’ದ ರೂವಾರಿಯೂ ಹೌದು. ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ, ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ್ದಾರೆ. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’. ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ. ಮುಡೇಬಳ್ಳಿ, ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆ), ಬಹುಧಾನ್ಯ (ಉದಯವಾಣಿ), ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)-ಇವು ಅಂಕಣಗಳ ಶೀರ್ಷಿಕೆಗಳು. ಪ್ರಮುಖ ಕೃತಿಗಳು: ಕಾನ್ ಗೌರಿ, ಗೌರಿ ಜಿಂಕೆಯ ಆತ್ಮಕಥೆ, ಅರಣ್ಯ (ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಿತ), ಅರಣ್ಯ ಜ್ಞಾನದ ...
READ MORE