ಕನ್ನಡದಲ್ಲಿಯೇ ರಚನೆಯಾದ ಶಾಸನಗಳ ಅಧ್ಯಯನ ಈ ಕೃತಿ. ಡಾ. ಆರ್.ಸಿ. ಹಿರೇಮಠ ಅವರೊಂದಿಗೆ ಸೇರಿ ಎಂ.ಎಂ. ಕಲಬುರ್ಗಿ ಅವರು ರಚಿಸಿದ ಪುಸ್ತಕ.
ಒಂದೆಡೆ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡವನ್ನು ಗಮನದಲ್ಲಿರಿಸಿಕೊಂಡು ಮತ್ತೊಂದೆಡೆ, ಜೈನ, ಬ್ರಾಹ್ಮಣ, ವೀರಶೈವ ಧರ್ಮಗಳನ್ನು ಆಧರಿಸಿ ಶಾಸನಗಳನ್ನು ಅಭ್ಯಸಿಸಲಾಗಿದೆ. ಒಟ್ಟು 32 ಮಹತ್ವದ ಶಾಸನಗಳ ಅಧ್ಯಯನ ಇದಾಗಿದೆ. ಜೊತೆಗೆ ಪದವಿವರಣಾ ಕೋಶವೂ ಇದೆ. ಕನ್ನಡದ ಬಗ್ಗೆ ಉನ್ನತ ಅಧ್ಯಯನ ನಡೆಸುವವರನ್ನು ಗಮನದಲ್ಲಿರಿಸಿಕೊಂಡು ಕೃತಿ ಮೂಡಿಬಂದಿದೆ.
ಈ ಪುಸ್ತಕವನ್ನು ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ಮೊದಲಿಗೆ ಪ್ರಕಟಿಸಿತ್ತು.
©2024 Book Brahma Private Limited.