ಮುಂಬೈ ಕನ್ನಡಿಗರಾದ ಲೇಖಕ ಡಾ.ಜಿ.ವಿ ಕುಲಕರ್ಣಿ ಅವರ ಪ್ರಬಂಧ ಕೃತಿ. ಕುಲಕರ್ಣಿ ಅವರ ‘ಗೋಕಾಕರ ಸಾಹಿತ್ಯದ ಮೇಲೆ ಶ್ರೀ ಅರವಿಂದರ ಪ್ರಭಾವ’ ಮಹಾಪ್ರಬಂಧಕ್ಕೆ ಮುಂಬೈ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿತ್ತು. ಇಂಗ್ಲಿಷಿನಲ್ಲಿ ಸಲ್ಲಿಸಿದ್ದ ಈ ಮಹಾಪ್ರಬಂಧವು 23 ವರ್ಷಗಳ ನಂತರ ಕನ್ನಡಕ್ಕೆ ಅನುವಾದಗೊಂಡಿದೆ. ಇದರಲ್ಲಿ ಒಂಬತ್ತು ಅಧ್ಯಾಯಗಳಿವೆ. ಸಾಹಿತ್ಯದಲ್ಲಿ ತೌಲನಿಕ ಅಧ್ಯಯನಕ್ಕೆ ಮಹತ್ವದ ಸ್ಥಾನವಿದೆ. ಮೇರು ಸಾಹಿತಿಗಳ ಕಾವ್ಯ ಕೃಷಿಯನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸಿ, ವಿಮರ್ಶಾತ್ಮಕ ಬರಹ ಸೃಜಿಸುವುದು ಸವಾಲಿನ ಕೆಲಸವೇ ಸರಿ. ಗೋಕಾಕರು ಮತ್ತು ಅರವಿಂದ ಇಬ್ಬರೂ ಸಾಹಿತ್ಯ ಲೋಕದಲ್ಲಿ ಸಂಚಲನ ಮೂಡಿಸಿದ ಮಹಾನ್ ಸಾಹಿತಿಗಳು. ಇಬ್ಬರ ಆಯ್ದ ಕವನಗಳನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸಿ, ಕಾವ್ಯಪ್ರಿಯರಿಗೆ ಸತ್ವಯುತವಾಗಿ ತಿಳಿಸಿಕೊಡುವಲ್ಲಿ ಲೇಖಕರು ವಹಿಸಿರುವ ಮುತುವರ್ಜಿ ಹಾಗೂ ಶ್ರಮ ಈ ಕೃತಿಯಲ್ಲಿ ಎದ್ದುಕಾಣಿಸುತ್ತದೆ.
©2024 Book Brahma Private Limited.