ಕನ್ನಡದ ಅಪ್ರತಿಮ ಸಂಶೋಧಕರಲ್ಲಿ ಒಬ್ಬರಾದ ಡಾ. ಎಂ.ಎಂ. ಕಲಬುರ್ಗಿ ಕನ್ನಡದಲ್ಲಿ ಸಂಶೋಧನಶಾಸ್ತ್ರ ಬೆಳೆದು ಬಂದ ದಾರಿಯನ್ನೂ ಅದರ ಅರ್ಥ ವಿಸ್ತಾರವನ್ನೂ ಕೃತಿಯಲ್ಲಿ ವಿವರಿಸಿದ್ದಾರೆ.
ಅವರ ಪ್ರಕಾರ ’ಪಶ್ಚಿಮದಿಂದ ೧೯ನೆಯ ಶತಮಾನದಲ್ಲಿ ಭಾರತವನ್ನು ಪ್ರವೇಶಿಸಿದ ಈ 'ಜ್ಞಾನಶಿಸ್ತು' ಭಾಷಾಶಾಸ್ತ್ರ, ಅರ್ಥಶಾಸ್ತ್ರ, ಭೌತಶಾಸ್ತ್ರಗಳಂತೆ ಒಂದು ಶಾಖೆಯಲ್ಲ. ಇಂಥ ಎಲ್ಲ ಶಾಖೆಗಳ ಅರ್ಥಮಾಡಿಕೊಳ್ಳುವಿಕೆ, ಮುಂದುವರಿಕೆಗಳ ತತ್ವ ಮತ್ತು ವಿಧಾನಗಳನ್ನು ಪ್ರತಿಪಾದಿಸುವ ಒಂದು ಶಾಖೆಯಾಗಿದೆ’.
ಸಾಹಿತ್ಯ ಸಂಶೋಧನೆಗೆ ಉತ್ತಮ ಮಜಲು ಒದಗಿಸುವ ಕೃತಿ ಇದು.
©2024 Book Brahma Private Limited.