ಜಾನಪದ ಸಂಶೋಧನೆಯ ಹೊಸ ಸಾಧ್ಯತೆಗಳು ಕೃತಿಯು ಇಂದಿನ ಸಮಾಜದ ಬದಲಾವಣೆ, ಜಾನಪದೀಯ ಆಚರಣೆಗಳ ಆಧುನೀಕರಣದ ಕುರಿತು ವಿವರಿಸುತ್ತದೆ. ಉದಾಹರಣೆಯೊಂದಿಗೆ ಜಾನಪದದ ಹೊಸ ಸಾಧ್ಯತೆಗಳ ಬಗ್ಗೆ ವಿವರಿಸಿರುವ ಲೇಖಕರು ’ಬಹುರಾಷ್ಟ್ರೀಯ ಕಂಪನಿಗಳು ತಮ್ಮದೊಮದು ಸಾಮಾನ್ಯ ಪಾನೀಯಕ್ಕೂ ದೊಡ್ಡ ದೊಡ್ಡ ಸಿನಿಮಾ ನಟ, ನಟಿಯನ್ನು ಬಳಸಿಕೊಲ್ಳುತ್ತಾರೆ. ಹಾಗೆ ಮಾಡುವಾಗ ವೀಕ್ಷಕರಿಗೆ ಪ್ರಿಯವಾದ, ಪರಿಚಿತವಾದ ಕೆಲವೊಂದು ಜಾನಪದೀಯ ಹಿನ್ನೆಲೆಯ ಪೋಷಾಕು, ಪರಿಸರ, ಸಂಗೀತ, ಕಲಾ ಪ್ರಕಾರ- ಇಂತಹ ಏನನ್ನಾದರೂ ಪ್ರಧಾನವಾಗಿ ಬಳಸಿಕೊಳ್ಳುತ್ತಾರೆ. ಹೀಗೆ ಆಧುನಿಕತೆಯ ಹಾದಿಯಲ್ಲಿ ಜಾನಪದ ಹೊಸ ಸಾಧ್ಯತೆಗಳ ಕುರಿತು ಅರಿಯಲು ಪ್ರಯತ್ನಿಸಿದ್ದಾರೆ.
ಡಾ. ಟಿ. ಗೋವಿಂದರಾಜು ಕವಿಯಾಗಿ, ಪ್ರಬಂಧಕಾರರಾಗಿ, ಕತೆಗಾರರಾಗಿ ಪರಿಚಿತರು. ಇವರು ಹುಟ್ಟಿದ್ದು 15.01.1953 ದೊಡ್ಡಬಳ್ಳಾಪುರ ತಾ. ಚನ್ನಾದೇವಿ ಅಗ್ರಹಾರದಲ್ಲಿ. ಇವರ ತಂದೆ ದೊಡ್ಡೇರಿ ತಿಮ್ಮರಾಯಪ್ಪ, ತಾಯಿ ಹೊನ್ನಮ್ಮ. ಕೃಷಿಕ ಮನೆತನದವರು. ಹೊನ್ನಮ್ಮ ಅವರು ತಮ್ಮ ಅಪಾರ ದೇಸೀ ಜ್ಞಾನ ವಿಶೇಷದ ಅಭಿವ್ಯಕ್ತಿಗಾಗಿ ರಾಜ್ಯ ಪ್ರಶಸ್ತಿ ಪುರಸ್ಕಾರ ಪಡೆದವರು. ಬೆಂಗಳೂರು ವಿಶ್ವಿ ವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿ ಹಾಗೂ ಜಾನಪದ ಅಧ್ಯಯನದಲ್ಲಿ ಪಿಎಚ್.ಡಿ. ಪಡೆದ ಟಿ. ಗೋವಿಂದರಾಜು, ಪ್ರಾರಂಭಕ್ಕೆ ಸಿನಿಮಾ ಕ್ಷೇತ್ರ, ಎಚ್. ಎಲ್. ನಾಗೇಗೌಡರೊಂದಿಗೆ ಜಾನಪದ ಟ್ರಸ್ಟ್ ಕಾರ್ಯದರ್ಶಿಯಾಗಿ, ಜಾನಪದ ಜಗತ್ತು ಪತ್ರಿಕಾ ಸಂಪಾದಕನಾಗಿ ದುಡಿದ ಹಿರಿಮೆ ಹೊಂದಿದ್ದಾರೆ. ಸರ್ಕಾರದ ವಿವಿಧ ...
READ MORE