ರಮಣ ಮಹರ್ಷಿಗಳ ಬದುಕು, ಸಿದ್ಧಾಂತದ ಕುರಿತು ವಿವರಿಸುವ ಕೃತಿ ಎತ್ತಣ ಅಲ್ಲಮ? ಎತ್ತಣ ರಮಣ?. ರಮಣ ಮಹರ್ಷಿಗಳ ಬಗ್ಗೆ ಬಹಳಷ್ಟು ಜನಕ್ಕೆ ತಿಳಿದಿದೆ. ಆದರೆ, ಅವರು ಪ್ರತಿಪಾದಿಸಿದ ದರ್ಶನವನ್ನ ಯಾವುದೇ ಸಿದ್ಧಾಂತಗಳಲ್ಲಿ ಇಂದು ಹಿಡಿದಿಡಲು ಸಾಧ್ಯವಾಗುತ್ತಿಲ್ಲ. ಅವರೊಬ್ಬ ಮಹಾದಾರ್ಶನಿಕ, ತತ್ವಜ್ಞಾನಿ, ದೇವಮಾನವ ಎಂದು ಎಲ್ಲರೂ ಒಪ್ಪುತ್ತಾರೆ. ಇಪ್ಪತ್ತನೇ ಶತಮಾನದಲ್ಲಿಯೇ ಬದುಕ್ಕಿದ್ದ ಇಂತಹ ಮಹಾಯೋಗಿಗೆ ಆಧ್ಯಾತ್ಮದತ್ತ ಸೆಳೆದದ್ದು ಏನು? ಅವರ ತತ್ವದ ತಿರುಳೇನು? ಅವರ ಪ್ರಕಾರ ದೇವರು ಎಂದರೆ ಯಾರು? ಹನ್ನೆರಡನೇ ಶತಮಾನದಲ್ಲಿ ಬದುಕಿದ್ದ ಕನ್ನಡಿಗರ ಅಲ್ಲಮಪ್ರಭುವನ್ನ ವಿಶ್ವದ ಶ್ರೇಷ್ಟಮಟ್ಟದ ತತ್ವಜ್ಞಾನಿಗಳಿಗೆ ಹೋಲಿಸುತ್ತಾರೆ. ಅಲ್ಲಮ ಮತ್ತು ಬುದ್ಧನನ್ನ, ಅಲ್ಲಮ ಮತ್ತು ಕಬೀರರನ್ನ, ಅಲ್ಲಮ ಮತ್ತು ರಾಮಕೃಷ್ಣ ಪರಮಹಂಸರನ್ನ ಜೊತೆಯಲ್ಲಿ ಹೋಲಿಕೆ ಮಾಡುವ ಪುಸ್ತಕಗಳು ಬಂದಿವೆ. ಅಲ್ಲಮನನ್ನ ಶೇಕ್ಸ್ಪಿಯರ್, ಸಾಕ್ರೇಟಿಸ್, ರೂಮಿ ಇಂತಹ ಮಹಾತತ್ವಜ್ಞಾನಿಗಳ ಸರಿಸಮನಾದವನು ಎಂದು ಎಚ್ ತಿಪ್ಪೇರುದ್ರಸ್ವಾಮಿಯವರು ಹೇಳಿದ್ದಾರೆ. ಇಂತಹ ಅಲ್ಲಮಪ್ರಭುವಿಗೂ ಅರುಣಾಚಲದ ಶ್ರೀರಮಣ ಮಹರ್ಷಿಗೂ ಎತ್ತಣಿಂದೆತ್ತ ಸಂಬಂಧ? ಈ ಕುರಿತು ಪುಸ್ತಕವು ವಿವರಿಸಿದೆ.
©2024 Book Brahma Private Limited.