ಸಂಶೋಧಕ ಶಂ.ಬಾ. ಜೋಶಿ ಅವರ ಸಂಶೋಧನಾತ್ಮಕ ಕೃತಿ-ಹಾಲುಮತ ದರ್ಶನ. ದರ್ಶನ ಎಂದರೆ ಯೌಗಿಕ ಭಾಷೆಯಲ್ಲಿ ತತ್ವ ಪ್ರಣಾಲಿ. ಸಾಕ್ಷಾತ್ಕಾರಕ್ಕೆ ಸಂಬಂಧಿಸಿದ್ದು, ಸಾಕ್ಷಾತ್ಕಾರವು-ಒಳಗೆ ಹುದುಗಿರುವುದನ್ನು ಹೊರ ತೆಗೆದು ನೈಜ ರೂಪವನ್ನು ತೋರುವುದೇ ಆಗಿದೆ. ಹಾಲುಮತ ದರ್ಶನ ಎಂದರೆ ಒಂದು ಜನಾಂಗೀಯ ಅಭ್ಯಾಸವಲ್ಲ; ಸಂಸ್ಕೃತಿ, ಭಾಷೆ, ಜನಜೀವನ, ಕಥೆ, ಪುರಾಣ ಹೀಗೆ ಮರೆತು ಹೋದ ಮತ್ತು ಅರ್ಥವಾಗದ ಅನೇಕ ಸಂಗತಿಗಳಿಂದ ತೋರುವ ಪ್ರಸಂಗಗಳನ್ನು ಇಲ್ಲಿ ಚರ್ಚಿಸಲಾಗಿದೆ. ಹಾಲಿನಲ್ಲಿ ನೀರಿದೆ. ಹಾಲು-ನೀರು ಇವು ತತ್ವಗಳು. ಇವುಗಳನ್ನು ಅವಲಂಬಿಸಿಯೇ ಸಂಪ್ರದಾಯಗಳು ಬೆಳೆದಿವೆ. ಇವು ಭಾರತೀಯವೇ? ಅನ್ಯದೇಶೀಯವೇ? ಶೈವ-ವೈಷ್ಣವ-ದ್ರಾವಿಡ ಜನಾಂಗಕ್ಕೆ ಇವುಗಳ ಸಂಬಂಧವೇನು? ಈ ಕುರಿತ ಚಿಂತನೆಯೇ ಹಾಲುಮತ ದರ್ಶನ.
ಕನ್ನಡ ಭಾಷೆ, ಕರ್ನಾಟಕ ಇತಿಹಾಸ ಹಾಗೂ ಭಾರತೀಯ ಸಂಸ್ಕೃತಿಯ ಸಂಶೋಧಕರಾದ ಶಂ.ಬಾ. ಜೋಶಿ ಅವರು ಕನ್ನಡ ಸಂಶೋಧನಾ ಕ್ಷೇತ್ರದ ಬಲುದೊಡ್ಡ ಹೆಸರು. 1896ರ ಜನೇವರಿ 4ರಂದು ಗುರ್ಲಹೊಸೂರಿನಲ್ಲಿ ಜನಿಸಿದರು. ತಂದೆ ಬಾಳದೀಕ್ಷಿತ ಜೋಶಿ ಮತ್ತು ತಾಯಿ ಉಮಾಬಾಯಿ. ವಿದ್ಯಾಭ್ಯಾಸ ಗುರ್ಲಹೊಸೂರು, ಬೊಮ್ಮನಹಳ್ಳಿ, ಪುಣೆ ಹಾಗೂ ಧಾರವಾಡಗಳಲ್ಲಿ ಆಯಿತು. 1916ರಲ್ಲಿ ಧಾರವಾಡದ ಸರ್ಕಾರಿ ತರಬೇತಿ ಕಾಲೇಜು ಸೇರಿ ಶಿಕ್ಷಣ ತರಬೇತಿ ಪಡೆದರು. ಚಿಕ್ಕೋಡಿಯಲ್ಲಿ ಶಾಲಾ ಶಿಕ್ಷಕರಾಗಿ (1926-27) ಸೇವೆ ಸಲ್ಲಿಸಿದ ಮೇಲೆ 1928ರಲ್ಲಿ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇರಿದ ಅವರು 1946ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಕರ್ನಾಟಕ ...
READ MORE