ಹಿರಿಯ ಸಂಶೋಧಕ ಷ. ಶೆಟ್ಟರ್ ಸಾಹಿತ್ಯ ಚರಿತ್ರೆಯ ಜೊತೆಗೆ ಸಾಮಾಜಿಕ ಚರಿತ್ರೆಯನ್ನು ಹೊಸಬಗೆಯಲ್ಲಿ ಅಧ್ಯಯನ ಮಾಡಿರುವ ಕೃತಿ ’ಹಳಗನ್ನಡ-ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ’.
ಶಾಸನಗಳಲ್ಲಿ ಸಾಹಿತ್ಯಕ ಅಂಶಗಳು ಇರುವುದರ ಜೊತೆಗೆ ಸಾಮಾಜಿಕ ಅಂಶಗಳೂ ಇರುತ್ತವೆ. ಉದಾಹರಣೆಗೆ ಸಂಸ್ಕೃತ ಭಾಷಾ ವ್ಯವಹಾರವು ಬಹತೇಕ ಒಂದು ಸಮಾಜದ ಒಂದೇ ಬಗೆಯ ಕೊಡು-ಕೊಳ್ಳುವಿಕೆಗೆ ಸೀಮಿತವಾಗಿದ್ದರೆ, ಕನ್ನಡ ಭಾಷಾ ವ್ಯವಹಾರವು ಬ್ರಾಹ್ಮಣರನ್ನೊಳಗೊಂಡಂತೆ ಸಮಾಜದ ಎಲ್ಲಾ ವರ್ಗಗಳ ಕೊಡುಕೊಳ್ಳುವಿಕೆಗೆ ವಿಸ್ತರಿಸಿಕೊಂಡಿತ್ತು ಎಂಬ ಅಂಶವನ್ನು ಬಿಚ್ಚಿಡುತ್ತಾರೆ. .
ಅಲ್ಲದೆ ಕರ್ನಾಟಕದಲ್ಲಿ ಮೊದಲ ಸಹಸ್ರಮಾನದಿಂದಲೂ ವಿಫುಲ ಪ್ರಮಾಣದಲ್ಲಿ ಶಾಸನಗಳು ದೊರೆತ ಹಿನ್ನೆಲೆಯನ್ನೂ ಕೃತಿ ಚರ್ಚಿಸುತ್ತದೆ.
ಷ.ಶೆಟ್ಟರ್ ಅವರು ಹುಟ್ಟಿದ್ದು 11 ಡಿಸೆಂಬರ್ 1935 ರಂದು. ಊರು ಬಳ್ಳಾರಿ ಜಿಲ್ಲೆಯ ಹಂಪಸಾಗರ. ಮೈಸೂರು, ಧಾರವಾಡ ಮತ್ತು ಕೇಂಬ್ರಿಜ್ ಗಳಲ್ಲಿ ಉನ್ನತ ವ್ಯಾಸಂಗ, ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾ ಇತಿಹಾಸ, ದರ್ಶನಶಾಸ್ತ್ರ ಮತ್ತು ಹಳಗನ್ನಡ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳ ಪ್ರಕಟಣೆ. ವಿವಿಧ ವಿಶ್ವವಿದ್ಯಾಲಯದಲ್ಲಿ ಬೋಧನೆ. 1960 -96, ಭಾರತೀಯ ಕಲಾ ಇತಿಹಾಸ ಸಂಸ್ಥೆಯ ನಿರ್ದೇಶಕತ್ವ 1978-95, ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಅಧ್ಯಕ್ಷ ಸ್ಥಾನ-1996-99, ಬೆಂಗಳೂರಿನ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ನಲ್ಲಿ ಡಾ.ಎಸ್.ರಾಧಾಕೃಷ್ಣನ್ ಪ್ರಾಧ್ಯಾಪಕತ್ವ 2002-2010, ...
READ MORE