ಕರ್ನಾಟಕ ಮಾತ್ರವಲ್ಲದೇ ದೇಶದ ನಾನಾ ಭಾಗಗಳಲ್ಲಿ ನಾನಾ ಐತಿಹಾಸಿಕ ವಿಷಯಗಳಿಗೆ ಸಂಬಂಧಿಸಿದಂತೆ ವೀರಗಲ್ಲುಗಳು, ಪಳಯುಳಿಕೆಗಳು ಕಂಡು ಬರುತ್ತವೆ. ಈ ಕೃತಿಯಲ್ಲಿ ಲೇಖಕಿ ಗೀತಾ ಪಾಟೀಲರು ಕರ್ನಾಟಕದ ಬಂದೂಕು ವೀರಗಲ್ಲುಗಳ ಬಗ್ಗೆ ಸಂಶೋಧನೆ ನಡೆಸಿ ಕೃತಿ ರಚಿಸಿದ್ದಾರೆ. ಪ್ರಾಚೀನ ಮೌಲ್ಯವೊಂದರ ಸಂಕೇತವಾಗಿರುವ ವೀರಗಲ್ಲುಗಳು ಕೇವಲ ಆತ್ಮಾರ್ಪಣೆಯ ಪ್ರತೀಕಗಳಾಗಿರದೇ ಸಮಕಾಲೀನ ಬದುಕಿನ ಸಾಮಾಜಿಕ ಜವಾಬ್ದಾರಿಯ ಸಂಕೇತಗಳಾಗಿಯೂ ಗೋಚರವಾಗುತ್ತವೆ. ಗೀತಾ ಅವರು ಬೇರೆ ಬೇರೆ ಆಯಾಮಗಳ ಮೂಲಕ ವೀರಗಲ್ಲುಗಳ ಕುರಿತ ಬೇರೆ ಮಜಲುಗಳ ಸಂಗತಿಗಳನ್ನು ವಿವರಿಸಿದ್ದಾರೆ. ಪ್ರಾಸಂಗಿಕವಾಗಿ ವೀರಗಲ್ಲುಗಳ ಶಿಲ್ಪಗಳ ವಿವರ, ವೇಷಭೂಷಣಗಳ ವಿವರ, ವೀರನ ಕೈಯಲ್ಲಿರುವ ಶಸ್ತ್ರಾಸ್ತ್ರಗಳ ಕುರಿತು ಈ ಕೃತಿಯುಲ್ಲಿ ವಿವೇಚನೆ ನಡೆದಿದೆ. ಒಟ್ಟಾರೆ ಕೃತಿಯು ಕರ್ನಾಟಕದಲ್ಲಿ ಬಂದೂಕು ವೀರಗಲ್ಲುಗಳು: ಶಿಲ್ಪ ವಿವರಣೆ, ಬಂದೂಕುಧಾರಿ ವೀರಗಲ್ಲುಗಳು, ಬಂದೂಕವನ್ನು ಪ್ರಯೋಗಿಸುವ ವೀರ, ಬಂದೂಕು ಸಹಿತ ವೀರಗಲ್ಲುಗಳು, ಬಂದೂಕು ವೀರಮಾಸ್ತಿಗಲ್ಲುಗಳು ಕುರಿತು ವಿವರಿಸಲಾಗಿದೆ.
ಯುವ ಬರಹಗಾರ್ತಿ ಡಾ.ಗೀತಾ ಪಾಟೀಲ ಅವರು ಜನಿಸಿದ್ದು 1990 ಜೂನ್ 1ರಂದು. ಕೊಪ್ಪಳ ಜಿಲ್ಲೆ ಕನಕಗಿರಿಯವರಾದ ಗೀತಾ ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿ.ವಿ.ಯಿಂದ ಇತಿಹಾಸ ಮತ್ತು ಪುರಾತತ್ತ್ವ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ ಕೊಪ್ಪಳದಲ್ಲಿ ಇತಿಹಾಸ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕದ ಬಂದೂಕು ವೀರಗಲ್ಲುಗಳು ಇವರ ಚೊಚ್ಚಲ ಕೃತಿ. ...
READ MORE