‘ಹಿಂದೂ ಧರ್ಮ’ ಸಂಶೋಧಕ, ಲೇಖಕ ಚಿದಾನಂದಮೂರ್ತಿ ಅವರ ಕೃತಿ. ಈ ಕೃತಿಯ ಶೀರ್ಷಿಕೆಯೇ ಹೇಳುವಂತೆ ವೇದಗಳೇ ಯಾವೆಲ್ಲಾ ಅಪಾರ್ಥಗಳಿಗೆ ಮತ್ತು ಆಕ್ರಮಣಗಳಿಗೆ ಹಿಂದೂಧರ್ಮ ಗುರಿಯಾಗಿದೆ ಎನ್ನುವ ರೀತಿಯಲ್ಲಿ ಪುಸ್ತಕದ ಎಲ್ಲ ವಿಷಯಗಳನ್ನು ಕ್ರೋಢಿಕರಿಸಬಹುದು. ಇದರಲ್ಲಿ ಅಪಾರ್ಥಗಳಿಗಿಂತ ಆಕ್ರಮಣಗಳ ಪಾಲು ದೊಡ್ಡದು. ಅದು ಹೊಸ ಹೊಸ ರೂಪಗಳಲ್ಲಿ ಈಗಲೂ ನಡೆಯುತ್ತಿದೆ ಎಂಬುದನ್ನು ಈ ಕೃತಿಯಲ್ಲಿ ಅರ್ಥವತ್ತಾಗಿ ವಿವರಿಸಿದ್ದಾರೆ.
ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ...
READ MORE