’ತಂತ್ರ’ ಮನೋವೈಜ್ಞಾನಿಕ ಪರಿಕಲ್ಪನೆ- ತಂತ್ರಗಳು ಹಾಗೂ ಮನೋವಿಜ್ಞಾನ - ಈ ಎರಡೂ ಭಿನ್ನ ಜ್ಞಾನಗಳ ನಡುವೆ ಸಂಶ್ಲೇಷಣೆ ಸಾಧ್ಯ ಹಾಗೂ ಅವಶ್ಯಕ ಎನ್ನುವುದನ್ನು ತೋರಿಸುವ ಪ್ರಯತ್ನವೇ ಈ ಕೃತಿ. ಭಾರತದ ಇನ್ನಿತರ ತತ್ವಚಿಂತನಾ ವಿಧಾನಗಳಿಗೆ ಭಿನ್ನವಾಗಿ, ತಂತ್ರಗಳು ಬರಿ ಅಭಿಜಾತ ಕೃತಿಗಳು ಮಾತ್ರವಲ್ಲ, ಅವು ವೈಜ್ಞಾನಿಕ ಸಂಹಿತೆಗಳು ಹೌದು. ಮನೋವೈಜ್ಞಾನಿಕ ಪರಿಕಲ್ಪನೆಗಳ ಬಗ್ಗೆ ತಂತ್ರಗಳು ಬರೀ ಊಹಾತ್ಮಕ ವಿಧಾನವನ್ನಷ್ಟೇ ಅಲ್ಲ, ತಾರ್ಕಿಕ ಹಾಗೂ ವೈಜ್ಞಾನಿಕ ವಿಧಾನಗಳನ್ನೂ ಬಳಸುತ್ತವೆ. ಇದನ್ನು ತೋರಿಸಲು ಆಧುನಿಕ ಮನೋವಿಜ್ಞಾನದ ವಿವಿಧ ಸಂಶೋಧನೆಗಳ ಸಾಕ್ಷ್ಯಾಧಾರಗಳನ್ನೂ ಈ ಕೃತಿಯಲ್ಲಿ ಬಳಸಲಾಗಿದೆ.
©2025 Book Brahma Private Limited.