‘ಕರುನಾಡಿನ ಜನಜೀವನ’ ಕೃತಿಯು ಜ್ಯೋತ್ಸ್ನಾ ಕಾಮತ್ ಅವರ ಸಂಶೋಧನಾ ಗ್ರಂಥವಾಗಿದೆ. ಇವರ ಸಂಶೋಧನೆಯ ಕೆಲವು ಹೊರಳು ನೋಟಗಳು ಇಲ್ಲಿವೆ. ಇತಿಹಾಸದ ಅಭ್ಯಾಸವೆಂಬುದು ಹಿಂದಿನ ಶಾಲಾ- ಕಾಲೇಜುಗಳಲ್ಲಿ ಕೇವಲ ರಾಜಮನೆತನಗಳ ಚರಿತ್ರೆ, ಯುದ್ಧಗಳು, ಒಡಂಬಡಿಕೆಗಳು, ಇಸ್ತ್ರಿಗಳ ಸರಮಾಲೆಗೆ ಒತ್ತುಕೊಡಲ್ಪಟ್ಟ ವಿಷಯವಾಗಿತ್ತು. ಆ ದಿನಗಳಲ್ಲಿ ಕರ್ನಾಟಕದ ಜನಸಾಮಾನ್ಯರ ಕುರಿತು ಅವರ ದೈನಂದಿನ ಜೀವನಕ್ರಮದ ಕುರಿತು. ಅಧ್ಯಯನವನ್ನು ಡಾ. ಜ್ಯೋತ್ಸಾ ಅವರು ಕೇಂದ್ರೀಕರಿಸಿದರು. ಸಂಸ್ಕೃತ, ಕನ್ನಡ ಶಾಸನಗಳು, ಶಾಸನಗ್ರಂಥಗಳು, ಕಾವ್ಯಗಳು, ವಿದೇಶಿಯರ ವೃತ್ತಾಂತಗಳನ್ನೆಲ್ಲ ಪುರಾವೆಗಾಗಿ ಬಳಸಿದರು. ಹಿಂದಿನವರ ಸಾಧನೆ, ಕೇವಲ ಆಧ್ಯಾತ್ಮಿಕ ಅಥವಾ ಯುದ್ಧ ಕ್ಷೇತ್ರಗಳಿಗೆ 25 ಸೀಮಿತವಾಗಿರಲಿಲ್ಲ. ಸುಖಜೀವನ ಸಾಧ್ಯವಾಗಿಸುವ ಹತ್ತು ಹಲವು ಪ್ರಕಾರಗಳಲ್ಲಿಯೂ ಮೀಸಲಾಗಿತ್ತು ಎಂಬುದನ್ನು ಇಲ್ಲಿಯ 17 ಪ್ರಬಂಧಗಳಲ್ಲಿ ಕಾಣಬಹುದಾಗಿದೆ. ಕನ್ನಡಿಗರ ಜೀವನೋತ್ಸಾಹದ, ಉಲ್ಲಾಸದ ಕ್ಷಣಗಳನ್ನು ಲೇಖಕಿ, ಸ್ನಾನ ಅನುಷಾನ, ಆಹಾರ-ವಿಹಾರ, ಆಟೋಟಗಳು, ಆಲಂಕರಣ ವಿಧಾನಗಳು, ವಾದ ಕಾರ ರ, ಗಳು, ಅಲಂಕರಣ ಹಾನಗಳು, ವಿಂಡೋಪಕರಣಗಳು, ಉಡಿಗೆಯ ದೈವಿಧ್ಯಾದಿಗಳನ್ನು ಸಂಶೋಧನಾಧಾರಿತವಾಗಿ ವಿಶ್ಲೇ಼ಷಿಸಿದ್ದಾರೆ.
ಸಂಶೋಧಕಿ, ಸ್ತ್ರೀ ಚಿಂತನೆಯ ಕನ್ನಡದ ಬರಹಗಾರ್ತಿ ಜ್ಯೋತ್ಸ್ನಾ ಕಾಮತ್ ಅವರು 1937 ಜನವರಿ 24 ರಂದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ವಾಯಿಯಲ್ಲಿ ಜನಿಸಿದರು. ‘ಸಂಸಾರದಲ್ಲಿ ಸ್ವಾರಸ್ಯ, ಹೀಗಿದ್ದೇವೆ ನಾವು, ನಗೆಕೇದಿಗೆ’ ಅವರ ಪ್ರಬಂಧ ಸಂಕಲನಗಳು. ‘ಕರ್ನಾಟಕದಲ್ಲಿ ಶಿಕ್ಷಣ ಪರಂಪರೆ, ಕರುನಾಡಿನ ಜನಜೀವನ, ಕೈಗನ್ನಡಿಯಲ್ಲಿ ಕನ್ನಡತಿ’ ಅವರ ಸಂಶೋಧನಾ ಕೃತಿಗಳು. ‘ಮಹಿಳೆ ಒಂದು ಅಧ್ಯಯನ, ನೆನಪಿನಲ್ಲಿ ನಿಂತವರು, ಮಹಿಳೆ ಅಂದು-ಇಂದು’ ಅವರ ಮಹಿಳಾ ಅಧ್ಯಯನ ಕೃತಿಗಳು. ಇದಲ್ಲದೆ ಶಾಂತಲೆ-ವಿಷ್ಣುವರ್ಧನ, ಕಮಲಾದೇವಿ ಚಟ್ಟೋಪಾಧ್ಯಾಯರ ಜೀವನ ಕೃತಿಗಳನ್ನು ರಚಿಸಿದ್ದು ಅವರ ಈ ಸಾಹಿತ್ಯ ಸೇವೆಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಕೆ.ಶಾಮರಾವ್ ದತ್ತಿನಿಧಿ ಪುರಸ್ಕಾರ, ...
READ MORE