ಕನ್ನಡದ ಮೊದಲ ಶಾಸ್ತ್ರಗ್ರಂಥ ’ಕವಿರಾಜಮಾರ್ಗ’. ನಾಡಿನ ಸಂಸ್ಕೃತಿಯ ಒಟ್ಟಾರೆ ಸ್ವರೂಪವನ್ನು ತಿಳಿಸಿಕೊಡುವ ಈ ಕೃತಿ ತನ್ನ ಅಸ್ತವ್ಯಸ್ತತೆ ಕಾರಣಕ್ಕಾಗಿ ಸಂಶೋಧಕರಿಗೆ ಸವಾಲೆಸೆಯುತ್ತಿತ್ತು. ಕೃತಿಕಾರ ಯಾರು ಎಂಬುದರಿಂದ ಹಿಡಿದು, ನಿರೂಪಣೆಯವರೆಗೆ ನಿಖರತೆಯನ್ನು ಬಯಸುತ್ತಿತ್ತು.
ಅಂತಹ ಸಂದರ್ಭದಲ್ಲಿ ಕಲಬುರ್ಗಿ ಅವರು (ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ- ಇದು ಅವರ ಪಿಎಚ್ ಡಿ ಗ್ರಂಥ ಕೂಡ) ಒಂದು ಅಧ್ಯಯನ ಶಿಸ್ತಿನ ಮೂಲಕ ಕವಿರಾಜಮಾರ್ಗವನ್ನು ಬಿಚ್ಚಿಡುತ್ತ ಹೋದರು. ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡುವವರಿಗೆ ಇದೊಂದು ಮುಖ್ಯ ಗ್ರಂಥ. ಸಂಶೋಧನೆ ಹೇಗಿರಬೇಕು ಎಂಬುದಕ್ಕೂ ಮಾದರಿ.
©2024 Book Brahma Private Limited.