ಸಂಶೋಧನಾ ಲೇಖನಗಳ ಸಂಕಲನ 'ಸಮುದಾಯ ಸಂಸ್ಕೃತಿ'. ಈ ಕೃತಿಯಲ್ಲಿ ಒಟ್ಟು 15 ಲೇಖನಗಳಿವೆ. ಮಾದಿಗ ಸಮುದಾಯದ ವಿವಾಹದಲ್ಲಿ ಬದಲಾವಣೆ, ಬೇಡ ಬುಡಕಟ್ಟಿನ ಪಾರಂಪರಿಕ ವೈದ್ಯ ಪದ್ಧತಿ, ಭಂಗಿ ಸಮುದಾಯದ ಪಕ್ಷಿ ನೋಟ, ನೇಕಾರ ಸಮುದಾಯಗಳ ವೃತ್ತಿ ಹಾಗೂ ಬದುಕಿನ ಸ್ಥಿತ್ಯಂತರ, ಕಾಡು ಕುರುಬ ಮತ್ತು ಜೇನುಕುರುಬ ಸಮುದಾಯಗಳ ಪಾರಂಪರಿಕ ಜ್ಞಾನ, ಅಭಿವೃದ್ಧಿ ಪ್ರಜಾಪ್ರಭುತ್ವ, ಮೀಸಲಾತಿಯ ಸಮಸ್ಯೆ ಸವಾಲುಗಳು, ವಚನಗಳಲ್ಲಿ ಸಮಾನತೆಯ ಸಂವೇದನೆಗಳು, ಸಾಮಾಜಿಕ ಬದುಕು ಮತ್ತು ಚೋಮನ ದುಡಿ, ಗಿರಿನಾಡು ತಾಯಂದಿರ ಆರೋಗ್ಯದ ಸಮಸ್ಯೆಗಳು, ಹಿರಿಯ ನಾಗರಿಕರು ಮತ್ತು ಆರೋಗ್ಯ, ಭಾವೈಕ್ಯತೆಯ ಕೇಂದ್ರವಾಗಿ ಸಿರಸಪ್ಪಯ್ಯನ ಮಠ ಇಂತಹ ವಿವಿಧ ವಿಷಯಗಳ ಕುರಿತು ಚರ್ಚೆ, ವಿಮರ್ಶೆ ಮತ್ತು ವಿಶ್ಲೇಷಣೆ ಇಲ್ಲಿಯ ಲೇಖನಗಳಲ್ಲಿವೆ.
©2024 Book Brahma Private Limited.