ಸೌಂದರ್ಯ ಸಮೀಕ್ಷೆ

Author : ಜಿ.ಎಸ್. ಶಿವರುದ್ರಪ್ಪ

Pages 438

₹ 270.00

Buy Now


Year of Publication: 2011
Published by: ಕಾಮಧೇನು ಪುಸ್ತಕ ಭವನ
Address: ನಂ-5/1, ನಾಗಪ್ಪ ಸ್ಟ್ರೀಟ್, ಶೇಷಾದ್ರಿಪುರ, ಬೆಂಗಳೂರು- 560020
Phone: 9449446328

Synopsys

ಲೇಖಕ ಹಾಗೂ ಸಾಹಿತಿ ಜಿ.ಎಸ್. ಶಿವರುದ್ರಪ್ಪ ಅವರು 1965ರಲ್ಲಿ ಕುವೆಂಪು ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ `ಸೌಂದರ್ಯ ಸಮೀಕ್ಷೆ` ಪ್ರೌಢಪ್ರಬಂಧ. ಸೌಂದರ್ಯ ಎಂದರೇನು? ಅದು ಇರುವುದಾದರೂ ಎಲ್ಲಿದೆ? ಭೌತಿಕವಾಗಿದೆಯೇ ಇಲ್ಲವೇ ಮಾನಸಿಕವೆ? ಸೌಂದರ್ಯದಲ್ಲಿ ಪ್ರಕಾರಗಳಿವೆ? ಗ್ರಹಿಕೆಯ ಮೇಲೆ ಸೌಂದರ್ಯ ನಿರ್ಧಾರವಾಗುತ್ತದೆ? ಸೌಂದರ್ಯ ಕುರಿತು ವಿವಿಧ ಗ್ರಂಥಗಳು, ಸನಾತನ ಕೃತಿಗಳಲ್ಲಿಯ ಉಲ್ಲೇಖಗಳು ಹೀಗೆ ಸೌಂದರ್ಯದ ಎಲ್ಲ ಮಗ್ಗಲುಗಳನ್ನು ವಿಶ್ಲೇಷಿಸಿದ ಬೃಹತ್ ಗ್ರಂಥವಿದು.

About the Author

ಜಿ.ಎಸ್. ಶಿವರುದ್ರಪ್ಪ
(07 February 1926 - 23 December 2013)

ಸಮನ್ವಯ ಕವಿಗಳಲ್ಲಿ ಒಬ್ಬರು ಎಂದು ಗುರುತಿಸಲಾಗುವ ಡಾ.ಜಿ.ಎಸ್. ಶಿವರುದ್ರಪ್ಪ ಅವರು ವಿಮರ್ಶಕರಾಗಿಯೂ ಗಣನೀಯ ಸಾಧನೆ ಮಾಡಿದ್ದಾರೆ. ಗದ್ಯ-ಪದ್ಯಗಳೆರಡರಲ್ಲಿಯೂ ಮಾಗಿದ ಪ್ರತಿಭೆ ಅವರದು. ತಂದೆ ಗುಗ್ಗುರಿ ಶಾಂತವೀರಪ್ಪ ಮತ್ತು ತಾಯಿ ವೀರಮ್ಮ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ 1926ರ ಫೆಬ್ರುವರಿ 7ರಂದು ಜನಿಸಿದರು. ಶಾಲಾ ಉಪಾಧ್ಯಾಯರ ಮಗನಾದ ಜಿ.ಎಸ್.ಎಸ್ ಅವರು ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆಯೇ ಬಡತನದ ಕಾರಣದಿಂದ ಸರಕಾರಿ ನೌಕರಿ ಹಿಡಿಯಬೇಕಾಯಿತು. ಗುಬ್ಬಿ ತಾಲ್ಲೂಕು ಕಚೇರಿಯಲ್ಲಿ ಗುಮಾಸ್ತರಾಗಿ ಸೇರಿದರು. ಆದರೆ ಓದಲೇಬೇಕೆಂಬ ಅದಮ್ಯ ಆಸೆಯಿಂದ ಕೆಲಸಕ್ಕೆ ವಿದಾಯ ಹೇಳಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಓದನ್ನು ಮುಂದುವರೆಸಿ ಬಿ.ಎ. ಪದವಿ (1949), ಸ್ವರ್ಣಪದಕದೊಂದಿಗೆ ...

READ MORE

Related Books