ಈ ಕೃತಿಯಲ್ಲಿ ನೇಕಾರರ ಜನಾಂಗದ ಸಾಂಸ್ಕೃತಿಕ ಹಿನ್ನೆಲೆ, ಅದರ ಒಳಪಂಗಡಗಳು, ನೇಕಾರಿಕೆಯಲ್ಲಿ ಕುಟುಂಬದ ಪಾತ್ರ, ನೇಕಾರಿಕೆಯಲ್ಲಿರುವ ಪ್ರಾದೇಶಿಕ ವೈವಿದ್ಯತೆ, ಉತ್ಪಾದನೆ, ಮಾರಾಟ ವ್ಯವಸ್ಥೆ ಮತ್ತು ಸವಾಲುಗಳು, ನೇಕಾರರ ಪ್ರಸ್ತುತ ಆರ್ಥಿಕ ಸ್ಥಿತಿಗತಿ, ನೇಕಾರರಿಗೆ ದೂರಕುತ್ತಿರುವ ಸವಲತ್ತುಗಳು ಮೊದಲಾದ ವಿಷಯಗಳನ್ನು ಕುರಿತ ಲೇಖನಗಳಿದ್ದು ,ಭಾರತದಲ್ಲಿ ಕೃಷಿಯಷ್ಟೇ ಪ್ರಾಚೀನವಾದ ನೇಕಾರರಿಗೆ ವೃತ್ತಿಯ ಬಗ್ಗೆ ಈ ಕೃತಿಯು ಉತ್ತಮ ಮಾಹಿತಿಯನ್ನು ನೀಡುತ್ತದೆ. ಈ ಕೃತಿಯು ಒಲಗೊಂಡಿರುವ ಅಧ್ಯಾಯಗಳೆಂದರೆ: ನೇಕಾರರ ಸಾಂಸ್ಕೃತಿಕ ಹಿನ್ನಲೆ ,ನೇಕಾರರಲ್ಲಿ ಒಳಪಂಗಡಗಳು ,ನೇಕಾರಿಕೆಯಲ್ಲಿ ಕುಟುಂಬದ ಪಾತ್ರ , ನೇಕಾರಿಕ ವೃತ್ತಿಯಲ್ಲಿ ಯಜಮಾನ ಮತ್ತು ನೇಕಾರರು ,ನೇಕಾರಿಕ ವೃತ್ತಿಯಲ್ಲಿ ಪ್ರಾದೇಶಿಕ ವೈವಿಧ್ಯತೆ , ಉತ್ಪಾದನೆ ಮತ್ತು ಮಾರಾಟ ಸಮಸ್ಯೆ ,ನೇಕಾರರ ಆರ್ಥಿಕ ಸ್ಥಿತಿಗತಿ ,ನೇಕಾರರಿಗೆ ಸರ್ಕಾರಿ ಸವಲತ್ತುಗಳು ಮುಂತಾದ ವಿಷಯಗಳ ಕುರಿತು ಲೇಖಕರು ಈ ಕೃತಿಯಲ್ಲಿ ಚರ್ಚಿಸಿದ್ದಾರೆ.
©2025 Book Brahma Private Limited.