ಕರ್ನಾಟಕದ ಸೂಫಿಗಳು ಕೃತಿಯು ಕರ್ನಾಟಕದ ಸಂಸ್ಕೃತಿ ಚಿಂತನೆಯಲ್ಲಿ ಒಂದು ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾಗುತ್ತದೆ. ರಹಮತ್ ಅವರು ಸಂಶೋಧನಾತ್ಮಕ ಒಳನೋಟ ಮತ್ತು ಕಾಳಜಿ ಈ ಗ್ರಂಥದಲ್ಲಿ ಸೊಗಸಾಗಿ ಮೂಡಿ ಬಂದಿವೆ. ಸಮುದಾಯಗಳ ಸೃಜನಶೀಲತೆಯ ಹುಡುಕಾಟ ಎಂಬ ಬರಹ ಆರಂಭದಲ್ಲಿದೆ. ಅದಲ್ಲದೇ 13 ಅಧ್ಯಾಯಗಳಲ್ಲಿ ಸೂಫಿಗಳ ಬಗ್ಗೆ ಚರ್ಚಿಸಲಾಗಿದೆ. ಚರಿತ್ರೆಯ ಜತೆ ಗುದ್ದಾಟ, ಸೂಫಿಗಳು ಮತ್ತು ಅನುಭಾವ, ಸೂಫಿಗಳ ಆಗಮನ, ಸೂಫಿಗಳು ಹಾಗೂ ಭಾರತ, ಕರ್ನಾಟಕದ ಸೂಫಿಗಳು ಮತ್ತು ಸ್ಥಳೀಯ ಪಂಥಗಳು, ಕರ್ನಾಟಕದ ಸೂಫಿಗಳು ಮತ್ತು ಮೂಲಭೂತವಾದ, ಪ್ರಭುತ್ವ, ಜನಪ್ರಿಯತೆ, ಜನಪದೀಕರಣ, ಭಾಷೆ, ಕನ್ನಡ ಸಾಹಿತ್ಯ, ಸಂಗೀತಗಳ ಕುರಿತು ವಿವರವಾಗಿ ಚರ್ಚಿಸಲಾಗಿದೆ.
ಅನುಬಂಧದಲ್ಲಿ ಪಾರಿಭಾಷಿಕ ಪದಗಳು, ಪುಸ್ತಕಗಳು, ಸೂಫಿ ಸಂತರ ದರ್ಗಾಗಳ ಪಟ್ಟಿ, ಸೂಫಿ ಪ್ರಭಾವದ ಸಂತರು ಮತ್ತು ಮಠಗಳು, ಸೂಫಿ ಹಿನ್ನೆಲೆಯ ಊರುಗಳು, ಸೂಫಿ ಹಿನ್ನೆಲೆಯ ವ್ಯಕ್ತಿನಾಮಗಳು, ಉರುಸು ಮತ್ತು ಜಾತ್ರೆಗಳ ಕರಪತ್ರಗಳ ವಿವರ ನೀಡಿರುವುದು ಪುಸ್ತಕದ ಮಹತ್ವ ಹೆಚ್ಚಿಸಿದೆ.ಕರ್ನಾಟಕದ ಸಂಸ್ಕೃತಿಯಲ್ಲಿ ಅಂದರೆ ಕರ್ನಾಟಕದ ಚರಿತ್ರೆ, ಧರ್ಮ, ತತ್ತ್ವಶಾಸ್ತ್ರ, ಸಾಹಿತ್ಯ ಗಳು, ಸೂಫಿಗಳ ಕೊಡುಗೆಯನ್ನು ಈ ಕೃತಿ ಹುಡುಕಾಟ ಮಾಡುತ್ತದೆಈ ಕೊಡುಗೆಯನ್ನು ಲಿಖಿತ ದಾಖಲೆಗಳಿಗಿಂತ ಹೆಚ್ಚಾಗಿ, ಜನಸಮುದಾಯಗಳ ಬದುಕಿನ ನಂಬಿಕೆ ಆಚರಣೆಗಳಲ್ಲಿ ಇದು ಶೋಧಿಸುತ್ತದೆ. ಪ್ರೇಮತತ್ತ್ವದ ಅನುಭಾವಿಗಳಾದ ಸೂಫಿಗಳು ಕರ್ನಾಟಶ ಸಂಸ್ಕೃತಿ ಯಲ್ಲಿ ಬೆರೆತು ಹೋಗಿರುವ ಬಗೆಯನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾಗಿರುವ ರಹಮತ್ ತರೀಕೆರೆ ಅವರು ಸಂಶೋಧಕ, ವಿಮರ್ಶಕ, ಲೇಖಕ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸಮತಳದವರಾದ (ಜ. 1959) ಅವರು ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಎಂ.ಎ. ಪದವಿ ಪಡೆದಿದ್ದಾರೆ. ಸ್ಪಷ್ಟ ಸೈದ್ಧಾಂತಿಕ ನಿಲುವು ಹೊಂದಿರುವ ರಹಮತ್ ಅವರು ಬಂಡಾಯ ಸಾಹಿತ್ಯ ಸಂಘಟನೆಯಲ್ಲಿದ್ದವರು. ಪಶ್ಚಿಮದ ಲೇಖಕರಿಗಿಂತ ಭಾರತೀಯ ಭಾಷೆಗಳ ಲೇಖಕರಿಂದ ಕಲಿಯುವ ಅಗತ್ಯವಿದೆಯೆಂದು ಭಾವಿಸುವ ‘ದೇಸಿವಾದಿ’ ಲೇಖಕ. ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದ ಮೇಲೆ ಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಅವರ ಮೊದಲ ...
READ MORE