‘ಭಾರತ ಭಾಗ್ಯವಿಧಾತ’ ಲೇಖಕ ಕೃಷ್ಣಮೂರ್ತಿ ಚಮರಂ ಅವರು ರಚಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಕುರಿತಾದ ಸಂಶೋಧನಾತ್ಮಕ ಲೇಖನಗಳ ಸಂಕಲನ. ಈ ಕೃತಿಗೆ ಚಿತ್ರ ಸಾಹಿತಿ ನಾದಬ್ರಹ್ಮ ಹಂಸಲೇಖ ಬೆನ್ನುಡಿ ಬರೆದಿದ್ದಾರೆ. ‘ಆಧುನಿಕ ಭಾರತವನ್ನು ಸಮತೆ ಮತ್ತು ಮಮತೆಯಿಂದ ಕಟ್ಟಿದವರು ಬಾಬಾಸಾಹೇಬ್ ಅಂಬೇಡ್ಕರ್. ಅವರು ಬರೆದ ಸಂವಿಧಾನದಿಂದಲೇ ಭಾರತದ ಬಹುಜನರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವ ಘನತೆ ಮತ್ತು ಸರಿಸಮನಾಗಿ ಬದುಕುವ ಹಕ್ಕು ಅಧಿಕಾರಗಳು ದೊರೆತದ್ದು, ಬಾಬಾಸಾಹೇಬರು ಭಾರತದ ಎಲ್ಲಾ ಕ್ಷೇತ್ರಗಳನ್ನೂ ಆವರಿಸಿಕೊಂಡ ಮಹಾಚೇತನವಾಗಿದ್ದಾರೆ. ಆದ್ದರಿಂದ ಅವರನ್ನು ನಿಸ್ಸಂಶಯವಾಗಿ ಭಾರತ ಭಾಗ್ಯವಿಧಾತ ಎಂದು ಕೊಂಡಾಡಲೇಬೇಕು’ ಎನ್ನುತ್ತಾರೆ ನಾದಬ್ರಹ್ಮ ಹಂಸಲೇಖ. ಬಾಬಾ ಸಾಹೇಬರ ಬಹುಮುಖಗಳನ್ನು ಸಂಶೋಧನಾತ್ಮಕವಾಗಿ ಅನಾವರಣಗೊಳಿಸುವ ಡಾ. ಚಮರಂ ವಿರಚಿತ ಈ ಕೃತಿ ಅರಿವಿನ ಆಗಸಕ್ಕೆ ಹಬ್ಬುವ ಬಾಬಾಸಾಹೇಬ ಎಂಬ ಬಳ್ಳಿಯು ನೆಲಮೂಲದ ಆಳದಿಂದ ಎದ್ದು ಬಂದಿರುವಂತಾದ್ದು ಎಂಬುದನ್ನು ಪ್ರತಿ ಸನ್ನಿವೇಶದಲ್ಲೂ ಸಾಕ್ಷೀಕರಿಸುತ್ತದೆ. ಈ ಪುಸ್ತಕ ಬಾಬಾಸಾಹೇಬರ ಗುಣಕಂಡವರು, ಋಣವುಂಡವರು ಎಲ್ಲರೂ ಓದಲೇಬೇಕಾದ ಅತ್ಯುತ್ತಮ ಕೃತಿ.
ಲೇಖಕ ಡಾ. ಕೃಷ್ಣಮೂರ್ತಿ ಚಮರಂ ಮೂಲತಃ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚನ್ನಮಲ್ಲಿಪುರದವರು. ತಂದೆ-ಮಲಿಯಯ್ಯ, ತಾಯಿ- ರಂಗಮ್ಮ. ಪ್ರಾಥಮಿಕ ಶಿಕ್ಷಣವನ್ನು ಗುಂಡ್ಲುಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಮಾಧ್ಯಮಿಕ ಹಾಗೂ ಪ್ರೌಢಶಿಕ್ಷಣವನ್ನು ದೊಡ್ಡಹುಂಡಿ ಭೋಗಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ಪೂರೈಸಿದರು. ಆನಂತರ ಪಿಯುಸಿ ವಿಜ್ಞಾನ ವಿಷಯವನ್ನು ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪೂರೈಸಿದ ಅವರು ಮೈಸೂರು ವಿಶ್ವವಿದ್ಯಾನಿಲಯದ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದರು, ನಂತರ ಮಾನಸ ಗಂಗೋತ್ರಿಯಲ್ಲಿ ಎಂ.ಎಸ್ಸಿ(ಸಸ್ಯಶಾಸ್ತ್ರ), ಎಂ.ಫಿಲ್(ಬೀಜ ತಂತ್ರಜ್ಞಾನ) ಮತ್ತು ಅನ್ವಯಿಕ ಸಸ್ಯಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದರು. ವಿದ್ಯಾಭ್ಯಾಸದ ನಂತರ ಕೆಲಕಾಲ ‘ಕರ್ನಾಟಕ ರಿಮೋಟ್ ...
READ MORE