‘ಶಿಲ್ಪಕಲಾ ದೇವಾಲಯಕ್ಕೆ ದಾರಿ’ ಶ್ರೀನಿವಾಸಮೂರ್ತಿ ಎನ್. ಎಸ್ ಅವರ ಕೃತಿಯಾಗಿದೆ. ಇದಕ್ಕೆ ಶ್ರೀನಾಥ್ ಎಸ್. ವಿ. ಅವರ ಬೆನ್ನುಡಿ ಬರಹವಿದೆ; ರಾಜ್ಯದಲ್ಲಿ ನಮ್ಮ ಗಮನಕ್ಕೆ ಬಾರದ ಸಾವಿರಾರು ದೇವಾಲಯಗಳಿವೆ. ಅವುಗಳು ಕೂಡ ಒಂದಿಲ್ಲೊಂದು ಕಾರಣಕ್ಕೆ ಇತಿಹಾಸಿಕವಾಗಿ ಮಹತ್ವವುಳ್ಳವಾದರೂ ಬೇರೆ ಬೇರೆ ಕಾರಣಗಳಿಂದ ಅವು ಹೆಚ್ಚು ಬೆಳಕಿಗೆ ಬಂದಿಲ್ಲ. ಹೀಗೆ ಎಲೆ ಮರೆಯ ಕಾಯಿಯಂತೆ ಇರುವ ದೇವಾಲಯಗಳ ಕಿರು ಪರಿಚಯ ಕೈಪಿಡಿ "ಶಿಲ್ಪ ಕಲಾ ದೇವಾಲಯಕ್ಕೆ ದಾರಿ" ಪುಸ್ತಕ. ಶ್ರೀನಿವಾಸ ಮೂರ್ತಿಯವರು ನಾವು ನೋಡದ ನೋಡಿದ್ದರೂ ಆ ಬಗ್ಗೆ ಹೆಚ್ಚು ತಿಳಿದುಕೊಳ್ಳದೇ ಇರುವ ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸಿ ಅತ್ಯಮೂಲ್ಯವಾದ ಕೆಲಸವನ್ನು ಮಾಡಿದ್ದಾರೆ. ದೇವಾಲಯಗಳ ಮಾಹಿತಿಯ ಜೊತೆಯಲ್ಲಿ ಅಲ್ಲಿಗೆ ಹೇಗೆ ಹೋಗಬೇಕು ಅಲ್ಲಿ ನೋಡಬೇಕಾದ ಸ್ಥಳಗಳ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಾಮಾನ್ಯ ಓದುಗರಿಗೂ ಅರ್ಥವಾಗುವಷ್ಟು ಸರಳವಾಗಿ ನಿರೂಪಿಸಿದ್ದಾರೆ ಎಂಬುವುದನ್ನು ಈ ಪುಸ್ತಕದಲ್ಲಿ ನೋಡಬಹುದು.
ಶ್ರೀನಿವಾಸಮೂರ್ತಿ ಎನ್. ಎಸ್. ರವರು ಗಣಿತ ಲೇಖಕರಾಗಿದ್ದ ಶ್ರೀ ಸೀತಾರಾಮ ರಾವ್ ಎನ್. ಎಸ್. ಅವರ ಪುತ್ರರಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮುಗಿಸಿ ನಂತರ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು, ಕರ್ಣಾಟಕ ಬ್ಯಾಂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.. ಮೂಲತಃ ಶಿವಮೊಗ್ಗದಲ್ಲಿ ನೆಲೆಸಿದ್ದು ಪ್ರಸ್ತುತ ಕಾರ್ಯ ನಿಮಿತ್ತ ಬೆಂಗಳೂರಿನ ಪ್ರಾದೇಶಿಕ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರಾಗಿರುವ ಇವರು ವಿವಿಧ ಬಳಗದ ಮೂಲಕ ಇತಿಹಾಸದ ಹೊಸ ಹೊರಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದಾರೆ.. ಶಿಲ್ಪಕಲಾ ದೇವಾಲಯಕ್ಕೆ ದಾರಿ ಹೆಸರಿನಲ್ಲಿ 250 ಅಂಕಣಗಳ ...
READ MORE