ಕಲಬುರ್ಗಿ ಅವರ ಸಮಗ್ರ ಬರವಣಿಗೆ ಆಧರಿಸಿ 'ಮಾರ್ಗ' ಹೆಸರಿನಲ್ಲಿ ಆರು ಸಂಪುಟಗಳು ರಚನೆಯಾದ ಮೇಲೆ ಆ ಸಮುಟಗಳ ಕುರಿತು ಯುವ ಸಂಶೋಧಕರಿಂದ ನಿರ್ದಿಷ್ಟ ವಿಷಯವನ್ನು ಆಯ್ದು ಅಧ್ಯಯನಗಳು ನಡೆದವು. ಆ ವಿಶಿಷ್ಟ ಯೋಜನೆಯಡಿ ರೂಪುಗೊಂಡ ಪುಸ್ತಕ 'ನಾಮ ವ್ಯಾಸಂಗ'.
ಕಲಬುರ್ಗಿಅವರು ನಾಮ ವಿಜ್ಞಾನ ಎಂಬ ಹೊಸ ಶಾಸ್ತ್ರವೊಂದು ಕನ್ನಡದಲ್ಲಿ ಬೆಳೆಯುತ್ತಿರುವುದನ್ನು ಗುರುತಿಸಿ ಆ ಶಿಸ್ತಿಗೆ ಸಂಬಂಧಿಸಿದ ಕೃತಿಯೊಂದನ್ನು ರಚಿಸಿದರು. ಅಲ್ಲದೆ ಬೇರೆ ಬೇರೆ ಸಂದರ್ಭಗಳಲ್ಲಿ ವ್ಯಕ್ತಿ ನಾಮ, ಸ್ಥಳನಾಮಗಳಿಗೆ ಸಂಬಂಧಿಸಿದಂತೆ ವಿಚಾರಗಳನ್ನು ಮಂಡಿಸಿ ಲೇಖನಗಳನ್ನು ಪ್ರಕಟಿಸಿದ್ದರು. ಹೆಸ್ರರುಗಳಿಗೆ ಸಂಬಂಧಿಸಿದ ಆ ಎಲ್ಲ ಲೇಖನಗಳ ಸಂಗ್ರಹ ಈ ಕೃತಿ.
ಕನ್ನಡ ಸಾಹಿತ್ಯ ಮತ್ತು ಭಾಷಾಶಾಸ್ತ್ರ ಎರಡರಲ್ಲೂ ಪ್ರೌಢಿಮೆ ಹೊಂದಿರುವ ಸಂಶೋಧಕಿ ಡಾ. ಎಚ್. ಶಶಿಕಲಾ ಕೃತಿಯನ್ನು ಹೊರತಂದಿದ್ದಾರೆ.
©2024 Book Brahma Private Limited.