ವಚನಸಾಹಿತ್ಯದ ಪ್ರಕಟಣೆಯ ಇತಿಹಾಸ

Author : ಎಂ.ಎಂ. ಕಲಬುರ್ಗಿ

Pages 150




Published by: ವೀರಶೈವ ಅಧ್ಯಯನ ಸಂಸ್ಥೆ
Address: ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ-ಡಂಬಳ

Synopsys

ಪ್ರಾರಂಭದ ಪ್ರಯತ್ನಗಳ ಪ್ರಥಮ ಘಟ್ಟ, ವಿಜಾಪುರದ ಶಿವಾನುಭವ ಗ್ರಂಥಮಾಲೆಯ ದ್ವಿತೀಯ ಘಟ್ಟ, ಧಾರವಾಡ ಕನ್ನಡ ಅಧ್ಯಯನ ಪೀಠದ ತೃತೀಯ ಘಟ್ಟ, ಗದುಗಿನ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆಯ ಚತುರ್ಥಘಟ್ಟ ಎಂಬ ನಾಲ್ಕು ಹಂತಗಳಲ್ಲಿ ವಚನ ಸಾಹಿತ್ಯದ ಪ್ರಕಟಣೆಯ ಇತಿಹಾಸ ಹರಡಿಕೊಂಡಿರುವುದನ್ನು ಡಾ.ಎಂ.ಎಂ. ಕಲಬುರ್ಗಿ ಮತ್ತಿತರ ವಿದ್ವಾಂಸರು ಕೃತಿಯಲ್ಲಿ ದಾಖಲಿಸಿದ್ದಾರೆ.

ಬಸವಣ್ಣನವರ ಷಟಸ್ಥಲ ವಚನಗಳು ಕೃತಿ ಪ್ರಕಟಗೊಂಡ ಶತಮಾನೋತ್ಸವದ ಸಂದರ್ಭದಲ್ಲಿ ನಡೆದ ವಿಚಾರ ಸಂಕೀರ್ಣವೊಂದರಲ್ಲಿ ಕಲಬುರ್ಗಿ ಅವರೂ ಸೇರಿದಂತೆ ನಾಲ್ವರು ವಿದ್ವಾಂಸರು ಮಂಡಿಸಿದ ಪ್ರಬಂಧಗಳ ಪ್ರಕಟಿತ ರೂಪ ಈ ಕೃತಿ.

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books