ಲೋಕಾಯತ ಮತ್ತು ಶಾಕ್ತ-ಶೈವ ಕೃತಿಯು ಶಾಕ್ತ ಮತ್ತು ಶೈವ ಪರಂಪರೆಗಳ ಕುರಿತಾದದ್ದು. ತತ್ವಶಾಸ್ತ್ರ ಚರಿತ್ರೆಯಲ್ಲೂ ಕೂಡಾ ಲೋಕಾಯತ ಶೈವ ಪರಂಪರೆಗಳೇ ಪ್ರಾಚೀನ ಭೌತಿಕವಾದ ಎಂಬ ನಿಲುವನ್ನು ಲೇಖಕರಾದ ಬಸವರಾಜ್ ತೂಲಹಳ್ಳಿಯವರು ತಮ್ಮ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ.
ಭಾರತದ ಬಹುತೇಕ ತಾತ್ವಿಕ ಚರ್ಚೆಗಳಲ್ಲಿ ಸಹಜವಾಗಿ ಕಾಣಿಸುವ ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ. ಮರೆತು ಹೋಗಿರುವ ಅಥವಾ ಸಮಾಜ ಒತ್ತಾಯ ಪೂರ್ವಕವಾಗಿ ಮರೆಸಿಬಿಟ್ಟಿರುವ ಅನೇಕ ವಿಚಾರಗಳನ್ನು ಅವರು ಎರಡು ಸಂಪುಟಗಳಲ್ಲಿಓದುಗರ ಮುಂದಿಡಲು ಪ್ರಯತ್ನಿಸಿದ್ದಾರೆ.
ಈ ಕೃತಿಯಲ್ಲಿರುವ ಅನೇಕ ಸಂಗತಿಗಳನ್ನು ಒಪ್ಪಿಕೊಳ್ಳುವ, ಮರುಪರಿಶೀಲಿಸುವ, ವಿಸ್ತರಿಸುವ, ಅತ್ಯಂತ ತರ್ಕಬದ್ಧ ರೀತಿಯಲ್ಲಿ ನೋಡುವ ದೃಷ್ಟಿಕೋನವನ್ನು ಬಿತ್ತರಿಸಿದ್ದಾರೆ.
ಈ ಕೃತಿಯು ಸುದೀರ್ಘವಾದ ಮತ್ತು ಬಹಳ ಸಂಕೀರ್ಣವಾದ ಭಾರತೀಯ ಸಂಸ್ಕೃತಿಯನ್ನು ಆರ್ಯ-ದ್ರಾವಿಡ ಎಂದು ಆರಂಭದಲ್ಲಿ ವಿಭಜಿಸಿ ನೋಡುತ್ತಾ ಆರ್ಯ ಸಂಸ್ಕೃತಿಗೆ ವಿರುದ್ಧವಾಗಿ ದ್ರಾವಿಡ ಸಂಸ್ಕೃತಿಯನ್ನು ತಂದು ನಿಲ್ಲಿಸುತ್ತದೆ. ಆರ್ಯರ ಆಂತರಿಕ ತಿಕ್ಕಾಟದ ಬಗೆಗೆ ಒಳನೋಟವನ್ನು ನೀಡುತ್ತದೆ.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ತೂಲಹಳ್ಳಿಯಲ್ಲಿ 1962 ರಲ್ಲಿ ಜನಿಸಿದರು. ಉಪಜೀವನಕ್ಕೆ ಕಿರಾಣಿ ಅಂಗಡಿ ನಿರ್ವಹಣೆಯ ಜತೆಗೇ ಮೈಸೂರು ವಿಶ್ವವಿದ್ಯಾಲಯದಿಂದ ’ಐ.ಸಿ.ಸಿ ಅಂಡ್ ಸಿ.ಇ’ ಮೂಲಕ ಪದವಿ ನಂತರ 1992 ರಲ್ಲಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸ್ನಾತಕೋತ್ತರ ಪದವಿ. 1992 ರಿಂದ ದಾವಣಗೆರೆ, ಹರಪನಹಳ್ಳಿ, ಕೊಟ್ಟೂರುಗಳಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ಡಿಸೆಂಬರ್ ನಲ್ಲಿ ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಆಂಗ್ಲಭಾಷಾ ಉಪನ್ಯಾಸಕರಾಗಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯಿಂದ ನೇಮಕಗೊಂಡರು. ಪ್ರಸ್ತುತ ದಾವಣಗೆರೆ ಜಿಲ್ಲೆಯ ಹರಿಹರದ ದ.ರಾ.ಮ ಸರಕಾರೀ ...
READ MORE