ಹಿಂದೂಸ್ತಾನಿ ಗಾಯಕಿ ಡಾ. ಜಯದೇವಿ ಜಂಗಮಶೆಟ್ಟಿ ಅವರು ಕರ್ನಾಟಕ ವಿಶ್ವವಿದ್ಯಾಲಯದಿಂದ ‘ವಚನಗಾಯನ ಪರಂಪರೆಯ ನೆಲೆ ನಿಲುವುಗಳು’ ವಿಷಯವಾಗಿ ಪಡೆದ ಪಿಎಚ್ ಡಿ ಮಹಾಪ್ರಬಂಧದ ಕೃತಿ-‘ಕೇಡಿಲ್ಲವಾಗಿ ಹಾಡುವೆ’. 12ನೇ ಶತಮಾನಗಳ ಶರಣರ ವಚನಗಳ ಮೂಲಕ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಕಳಕಳಿಗಳನ್ನು, ಸಂಶೋಧಿಸಿದ ಹೊಳವುಗಳನ್ನು ಇಲ್ಲಿ ನೀಡಲಾಗಿದೆ. ವಚನಗಳು ಗಾಯನ ರೂಪು ತಳೆದಿದ್ದು, ತೀರಾ ತಡವಾಗಿ. ಅವುಗಳನ್ನು ಗಾಯನಕ್ಕೆ ಇಳಿಸಿದ ಸಂಗೀತಗಾರರ ಪೈಕಿ ಡಾ. ಮಲ್ಲಿಕಾರ್ಜುನ ಮನ್ಸೂರ ಅವರು ಮೊದಲಿಗರು. ಹೀಗೆ ವಚನ ಗಾಯನಗಳ ಪರಂಪರೆಯ ವಿಸ್ತೃತ ಚಿತ್ರಣ ನೀಡುವ ಕೃತಿ ಇದು.
ಸಂಗೀತಗಾರ್ತಿ, ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರು ಮೂಲತಃ ರಾಯಚೂರಿನವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ‘ವಚನಗಳ ಗಾಯನ ಪರಂಪರೆ’ ವಿಷಯವಾಗಿ ಪಿಎಚ್ ಡಿ ಪದವೀಧರರು. ಸಂಗೀತದಲ್ಲಿ ವಿದ್ವತ್ ವಿಶಾರದ ಪದವೀಧರರು. ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರು. ಜೈಪುರ ಗ್ವಾಲಿಯರ ಘರಾನಾ ಗಾಯಕಿ. ಕನ್ನಡ ಚಲನಚಿತ್ರಗಳ ಮೊದಲ ಸಂಗೀತ ನಿರ್ದೇಶಕಿ ಎಂಬ ಖ್ಯಾತಿ ಇವರದ್ದು. ರಾಗ-ಭೈರವಿ (2019) ಎಂಬುದು ಇವರು ಸಂಗೀತ ನಿರ್ದೇಶಿಸಿದ ಕನ್ನಡ ಚಲನಚಿತ್ರ. ಡಾ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಡಾ. ರಾಜಶೇಖರ ಮನ್ಸೂರ, ಜಯಶ್ರೀ ಪಟ್ನೆಗರ್ ಅವರ ಶಿಷ್ಯೆ. ಕಲಬುರಗಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಫೈನ್ ಆರ್ಟ್ಸ್-ಸಂಗೀತ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ಆಗಿಯೂ ಕೆಲಸ ...
READ MORE