ವಿನಾಯಕ ಕೃಷ್ಣ ಗೋಕಾಕ ಕನ್ನಡಸಂಸ್ಕೃತಿ ನಿರ್ಮಾಪಕರಲ್ಲಿ ಬಹು ದೊಡ್ಡ ಹೆಸರು. ಕೆಲವು ಅರ್ಥಗಳಲ್ಲಿ ಕುವೆಂಪು, ಬೇಂದ್ರೆ, ಮಾಸ್ತಿ ಮತ್ತು ಕಾರಂತರ ಸರಿಸಮಾನವಾಗಿ ನಿಂತು ಆಲೋಚಿಸುವಂಥ ಲೇಖಕರು. ಪ್ರಯೋಗಶೀಲತೆ ಅವರ ವಿಶಿಷ್ಟ ಗುಣ. ಕಾವ್ಯಕ್ಕೆ ಛಂದಸ್ಸಿನ ಚೌಕಟ್ಟನ್ನು ಮುರಿದು ಹೊಸತಾಗಿ ಪ್ರಯೋಗಿಸಿದ ದಿಟ್ಟ ಹೆಜ್ಜೆಯ ಮಾರ್ಗಕಾರ. ನಿಜವಾದ ಅರ್ಥದಲ್ಲಿ ಕನ್ನಡ ಕಾವ್ಯಕ್ಕೆ ನವ್ಯದ ರೂಪ ಮತ್ತು ವಸ್ತುವೈವಿಧ್ಯತೆಯನ್ನು ತಂದುಕೊಟ್ಟವರು. ಅವರ 'ಭಾರತ ಸಿಂಧು ರಶ್ಮಿ' ನಿಜವಾದ ಅರ್ಥದಲ್ಲಿ ಭಾರತದ ಮೊಟ್ಟಮೊದಲ ವಿಶಿಷ್ಟ ವಸ್ತುವನ್ನೊಳಗೊಂಡ, ಪರಂಪರೆಯನ್ನು ವರ್ತಮಾನದ ದೃಷ್ಟಿಕೋನಗಳಿಂದ ಬಗೆಯುವ, ಮಹಾಕಾವ್ಯದ ಜಾಡಿನಲ್ಲಿ ಅನನ್ಯವಾಗಿ ನಿಲ್ಲುವಂಥ ವಿಶಿಷ್ಠ ಕೃತಿ.
ಇಂಥ ವಿಶಿಷ್ಟ ಅನುಭವ ಪ್ರಪಂಚವನ್ನು ಕನ್ನಡ ಸಾಹಿತ್ಯಕ್ಕೆ ಅವರು ನೀಡಿರುವ ಹಲವು ಬಗೆಯ ಪ್ರಕಾರಗಳನ್ನು ಭಿನ್ನ ದೃಷ್ಟಿಕೋನಗಳಿಂದ ಮತ್ತು ಸೈದ್ದಾಂತಿಕ ನೆಲೆಗಟ್ಟಿನಿಂದ ವಿಶ್ಲೇಷಿಸಿರುವ ಲೇಖನಗಳು ಈ ಕೃತಿಯಲ್ಲಿವೆ. ಸಾಹಿತಿ ಶಿವರಾಮ ಕಾಡನಕುಪ್ಪೆ ಬಹಳ ಸೊಗಸಾಗಿ ವಿನಾಯಕರ ಸಾಹಿತ್ಯವನ್ನು ವಿಶ್ಲೇಷಿಸಿದ್ದಾರೆ.
ರಾಮನಗರ ಜಿಲ್ಲೆಯ ಕಾಡನಕುಪ್ಪೆಯ ಹಳ್ಳಿಯಲ್ಲಿ ಶಿವರಾಮು ಕಾಡನಕುಪ್ಪೆ (1953ರ ಆಗಸ್ಟ್ 9) ಜನಿಸಿದರು. ತಂದೆ ಲಿಂಗೇಗೌಡ, ತಾಯಿ-ಶಿವಮ್ಮ. ಕನ್ನಡ ಸಾಹಿತ್ಯವಲಯದಲ್ಲಿ ಉತ್ತಮ ವಿಮರ್ಶಕರು, ಪ್ರಬಂಧಕಾರರು, ಕವಿಗಳು, ಕಾದಂಬರಿಕಾರರು ಎಂಬ ಖ್ಯಾತಿ ಇವರಿಗಿದೆ. ದಲಿತ ಸಮುದಾಯದ ಜೀವನ ಅನುಭವಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಕೃತಿ-ಕುಕ್ಕರಹಳ್ಳಿ, ಮೈಸೂರು ವಿ.ವಿ. ಪದವಿ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ. ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಪದವಿ ಕಾಲೇಜು ಪ್ರಿನ್ಸಿಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು, 2006ರಲ್ಲಿ ಜರುಗಿದ ಬೆಂಗಳೂರು ಗ್ರಾಮಾಂತರ ಕನ್ನಡ ಸಾಹಿತ್ಯ ...
READ MORE