ಡಿ.ಎನ್. ಅಕ್ಕಿ ಅವರು ಬರೆದ ಗುಲಬರ್ಗಾ ಜಿಲ್ಲೆಯ ಜೈನ ಪರಂಪರೆ ಕೃತಿಯನ್ನು ಹಂಪಿಯ ಕನ್ನಡ ವಿ.ವಿ. ಪ್ರಸಾರಾಂಗ ಪ್ರಕಟಿಸಿದ್ದು, ಜೈನ ಪರಂಪರೆಗೆ ಸಂಬಂಧಿಸಿದ ಮತ್ತಷ್ಟು ಮಾಹಿತಿಯನ್ನು ಇದೇ ಸಂಶೋಧಕರು ’ಜಿನದನಿ’ ಕೃತಿಯಲ್ಲಿ ದಾಖಲಿಸಿದ್ದಾರೆ.
'ಗುಲಬರ್ಗಾ ಜಿಲ್ಲೆಯ ಶಾಸನಗಳಿಗೆ ಸಂಬಂಧಿಸಿದಂತೆ ಸಂಶೋಧಕರಾದ ಸೀತಾರಾಮ ಜಾಹಗೀರದಾರ್ ಹಾಗೂ ಎಂ.ಜಿ. ಮಂಜುನಾಥ ಅವರು ಶಾಸನಗಳ ಪಠ್ಯ ಒದಗಿಸಿದ್ದನ್ನು ಇವರು ವಿಶ್ಲೇಷಿಸಿದ್ದಾರೆ. ಕಲ್ಯಾಣ ಚಾಲುಕ್ಯರು, ಯಾದವರು, ಕಳಚೂರಿಗಳು ಮುಂತಾದ ಆಳ್ವಿಕೆಯ ಕಾಲದಲ್ಲಿ ಜೈನರ ಉಡುಗೆ-ತೊಡುಗೆ-ಆಹಾರ, ವೈದ್ಯಕೀಯ ಪದ್ಧತಿ ಇತ್ಯಾದಿ ಮಾಹಿತಿ ನೀಡಿದ್ದಲ್ಲದೇ, ಈ ವಿಷಯಗಳಿಗೆ ಸಂಬಂಧಿಸಿದ ಸುಮಾರು 30 ಶಾಸನಗಳನ್ನು ವಿಶ್ಲೇಷಿಸಿದ್ದು, ಕೃತಿಯ ಹೆಗ್ಗಳಿಕೆ.
ಡಿ.ಎನ್. ಅಕ್ಕಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಗಿರುವ ದೇವೇಂದ್ರ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು. ಗೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು, ಅವಗಣನೆಗೆ ಒಳಗಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರು ಮಾಡಿದ ಕೆಲಸ ಅನನ್ಯ. ಕವಿತೆಯ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಶ್ರೀ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ದಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ...
READ MORE