ಗೊಲ್ಲ ಸಿರುಮನ ಚರಿತೆ

Author : ಎಂ.ಎಂ. ಕಲಬುರ್ಗಿ

Pages 180




Published by: ಪ್ರಸಾರಾಂಗ
Address: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

Synopsys

'ಸಿರುಮಣನಾಯಕನ ಸಾಂಗತ್ಯ', 'ಸಿರುಮನ ಚರಿತೆ' ಬಳಿಕ ಡಾ.ಎಂ.ಎಂ. ಕಲಬುರ್ಗಿ ಸಂಪಾದಿಸಿದ ಮೂರನೇ ಕೃತಿ 'ಗೊಲ್ಲಸಿರುಮನ ಚರಿತೆ' . ಮಲ್ಲಕವಿಯೇ ಇದರ ಕರ್ತೃ ಇರಬೇಕೆಂಬುದು ಸಂಪಾದಕರ ಅಂದಾಜು. ಈತನ ಬಗ್ಗೆ ಇತರೆ ಕವಿ ಚರಿತಕಾರರಾಗಲೀ ಬೇರೆ ಕವಿಗಳಾಗಲೀ ಚರ್ಚಿಸಿಲ್ಲ. ಚಂದ್ರಗಿರಿಯ ಸಾಳುವ ನರಸಿಂಹ ಮತ್ತು ಗೊಲ್ಲಸಿರುಮನ ಮಧ್ಯೆ ಸಂಭವಿಸಿದ ಯುದ್ಧದ ಚಿತ್ರಣ ಇಲ್ಲಿದೆ. ಸಿರುಮ ಸಮರದಲ್ಲಿ ಮಣಿಯುತ್ತಾನೆ. ಇದು ಸಿರುಮನ ಸ್ವಾಭಿಮಾನ ಮತ್ತು ದುರಂತ ಕತೆಯೊಂದನ್ನು ತೆರೆದಿಡುತ್ತದೆ.
 

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books