ಸರಸ್ವತಿಯ ಹುಡುಕಾಟದ ಹಾದಿಯಲ್ಲಿ ಸಾಗಿದಾಗ ಕಂಡು ಬರುವ ವಿಸ್ಮಯಗಳ ಸರಮಾಲೆಯೇ ಈ ಪುಸ್ತಕ. ಪಿಹೆಚ್.ಡಿ. ಮಹಾಪ್ರಬಂಧವನ್ನು ಪರಿಷ್ಕರಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ನದಿಯೊಂದರ ಹೆಸರೆಂದು ಪರಿಚಿತವಾದ ʼಸರಸ್ವತಿʼ ಎಂಬ ಪದ ಸಾಹಿತ್ಯ ಶಾಸನ, ಜನಪದ, ಶಿಲ್ಪ ಹಾಗೂ ಚಿತ್ರಕಲೆ – ಈ ವಲಯಗಳಲ್ಲಿ ಹೊಂದಿದ ಮಾರ್ಪಾಡು, ಪಡೆದುಕೊಂಡ ಪ್ರಾಮುಖ್ಯತೆ, ಅದರ ಬಗೆಗಿನ ವಿಸ್ಮಯವನ್ನು ಆಳಗೊಳಿಸುತ್ತದೆ. ಸರಸ್ವತಿ ವಾಙ್ಮಯ ಭಾರತೀಯ ಸಂಸ್ಕೃತಿಯ ಎಲ್ಲ ಮಜಲುಗಳಲ್ಲಿ ವ್ಯಾಪಿಸಿದೆ. ಋಗ್ವೇದದಲ್ಲಿ ಪ್ರಾರಂಭವಾದ ಸರಸ್ವತಿ ದರ್ಶನ, ಕಾವ್ಯ ಮತ್ತಿತರ ಪ್ರಕಾರಗಳಲ್ಲಿ ವಿಕಾಸಹೊಂದಿ, ವಾಗ್ದೇವಿಯ ಪಟ್ಟಕ್ಕೇರಿರುವುದು ಅಚ್ಚರಿ ಮೂಡಿಸುತ್ತದೆ.
ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...
READ MORE