ಮರುಳಸಿದ್ಧಯ್ಯನವರು ಸಮಾಜೋ-ಮಾನವಶಾಸ್ತ್ರ ದೃಷ್ಟಿಕೋನದಿಂದ ’ಮಾಕುಂಟಿಯ ಮುದುಕರು’ ಪುಸ್ತಕವನ್ನು ಹೊರತಂದಿದ್ದಾರೆ. ಬರಿ ಮುಪ್ಪಾದವರ ಸಮಸ್ಯೆಗಳನ್ನು ಅಧ್ಯಯನ ಮಾಡುವುದಲ್ಲದೆ, ಬದಲಾಗುತ್ತಿರುವ ಹಳ್ಳಿ ಸಮುದಾಯದಲ್ಲಿ ಮುದುಕರ ಪಾತ್ರದ ಬಗ್ಗೆ ವಿಶ್ಲೇಷಣೆಯನ್ನೂ ಮಾಡಿದ್ದಾರೆ. ಮಾಕುಂಟಿಯ ಮುದುಕರು ಒಟ್ಟು ಕುಟುಂಬದಲ್ಲಿ, ರಕ್ತ ಸಂಬಂಧಗಳಲ್ಲಿ ಮತ್ತು ಜಾತಿ ವ್ಯವಸ್ಥೆಯಲ್ಲಿ ಹೇಗೆ ತಮ್ಮ ಸಾಂಪ್ರದಾಯಕ ಪಾತ್ರವನ್ನು ಆಡುತ್ತಾರೆ ಎಂದು ತೋರಿಸಿದ್ದಾರೆ. ಹಾಗೆಯೇ ತಮ್ಮ ಸಾಮಾಜಿಕ ಸ್ಥಾನಮಾನ, ಪ್ರಭಾವಗಳನ್ನು ಕಿರಿಯ ಪೀಳಿಗೆಯವರ ಮುಂದೆ ಪಂಚಾಯಿತಿರಾಜ್ ಮೂಲಕ ಹೇಗೆ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನೂ ವಿಶದಪಡಿಸಿದ್ದಾರೆ.
ಮರುಳಸಿದ್ಧಯ್ಯನವರು ಮಾಕುಂಟಿಯ ಬಗ್ಗೆ ಕೃತಿಯಲ್ಲಿ ವಿವರಿಸುತ್ತಾ ; ವೃದ್ಧರನ್ನು ವಯಸ್ಸಾಗುವಿಕೆ ಮತ್ತು ಅತಿ ವಯಸ್ಸಾಗುವಿಕೆ ಎಂದು ಎರಡು ಭಾಗಗಳನ್ನಾಗಿ ಮಾಡಬಹುದು. ಸರಾಸರಿ 55 ರಿಂದ 65 ವರ್ಷಗಳ ಒಳಗಿನವರು ದೈಹಿಕ ದೃಢತೆಯುಳ್ಳವರು, ಆದುದರಿಂದ ಹಣಕಾಸನ್ನು ಸಂಪಾದಿಸಬಲ್ಲವರು, ತಮ್ಮ ಕುಟುಂಬವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಲ್ಲವರಾಗಿರುತ್ತಾರೆ. 65 ವರ್ಷಗಳನ್ನು ದಾಟಿದವರು, ಹಕ್ಕುದಾರಿಕೆಯನ್ನು ಬಿಟ್ಟುಕೊಟ್ಟಿರುವುದಿಲ್ಲವಾದರೂ ತಮ್ಮ ಅಧಿಕಾರವು ತಮ್ಮ ಕೈಗಳಿಂದ ಯುವಕರ ಕೈಗೆ ಜಾರುತ್ತಿರುವುದನ್ನು ಗಮನಿಸಬಹುದು’ ಎಂದಿದ್ದಾರೆ ಇದು ಇಂದಿನ ಸಮಾಜದ ಚಿತ್ರಣವನ್ನು ವಿವರಿಸುತ್ತದೆ.
©2024 Book Brahma Private Limited.