‘ಕನ್ನಡ ನಾಟಕ ಮತ್ತು ವಾಸ್ತವತೆ’ ಬಸವರಾಜ ಡೋಣೂರರ ಸಂಶೋಧನಾ ಗ್ರಂಥ. ಹಿರಿಯ ಲೇಖಕ ಕೀರ್ತಿನಾಥ ಕುರ್ತಕೋಟಿ ಮಾರ್ಗದರ್ಶನದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಪದವಿಗಾಗಿ ಸಲ್ಲಿಸಿದ್ದ ಮಹಾಪ್ರಬಂಧ ವಿದು. ವಾಸ್ತವತೆಯ ಇತಿಹಾಸ, ಅನುಕರಣೆ ಮತ್ತು ವಾಸ್ತವತೆ, ವಾಸ್ತವತೆಯ ಸ್ವರೂಪ, ವಾಸ್ತವತೆಯ ಉದ್ದೇಶ, ಸಮೂಹ ಮಾಧ್ಯಮಗಳಲ್ಲಿ ವಾಸ್ತವತೆ, ಇಂಗ್ಲಿಷ್ ಸಾಹಿತ್ಯದಲ್ಲಿ ವಾಸ್ತವತೆ ಮತ್ತು ಕನ್ನಡ ಸಾಹಿತ್ಯದಲ್ಲಿ ವಾಸ್ತವತೆ ಎಂಬ ಅಂಶಗಳ ಆಧಾರದಲ್ಲಿ ವಿಷಯಗಳನ್ನು ವಿವರಿಸಲಾಗಿದೆ.
ನಂತರದ ಭಾಗದಲ್ಲಿ ನವೋದಯದ ನಾಟಕಕಾರರ ಕುರಿತ ಅಧ್ಯಯನಗಳಿವೆ. ನವೋದಯ ಚಳವಳಿ, ಟಿ.ಪಿ. ಕೈಲಾಸಂ, ಶ್ರೀರಂಗ ಅವರ ವಿವರಣೆಗಳೊಂದಿಗೆ ರಂಗಭೂಮಿಯನ್ನು ವಿಶ್ಲೇಷಣೆ ಮಾಡಲಾಗಿದೆ.
ಮೂರನೇ ಭಾಗದಲ್ಲಿ ’ನವ್ಯ ನಾಟಕಕಾರರ’ ಅಧ್ಯಯನವಿದೆ. ನವ್ಯ ಚಳವಳಿ, ನವ್ಯ ನಾಟಕ ಮತ್ತು ಐತಿಹಾಸಿಕತೆ, ಗಿರೀಶ್ ಕಾರ್ನಾಡ, ಚಂದ್ರಶೇಖರ ಕಂಬಾರ ಕುರಿತ ಸಂಶೋಧನಾ ಲೇಖನಗಳಿವೆ.
©2024 Book Brahma Private Limited.