ವೇದಗಳಿಗೆ ಪ್ರತಿಯಾಗಿ ನಿಂತ ತಂತ್ರ ವಿದ್ಯೆಯ ಬಗ್ಗೆ ಅಪಾರ ಅಧ್ಯಯನ ಮಾಡಿದ ಸಾಹಿತಿ ಸತ್ಯಕಾಮ. ಅವರದು ಕೇವಲ ಸೈದ್ಧಾಂತಿಕ ಅಭಿವ್ಯಕ್ತಿಯಾಗಿರಲಿಲ್ಲ. ತಾವು ಕಂಡ ಪ್ರಯೋಗಗಳ, ಅನುಭವಿಸಿದ ಪ್ರಯೋಗಗಳ ಆಧಾರದ ಮೇಲೆ ಅವರು ಬರೆದರು. ಅಂತಹ ಸತ್ಯಕಾಮರ ಕುರಿತು ಶಾಂತಾ ಮಠ ಅವರು ರಚಿಸಿದ ಕೃತಿ ಇದು.
ಸತ್ಯಕಾಮರು ಕಂಡುಂಡ ಸತ್ಯದರ್ಶನವನ್ನು ಕೃತಿಯಲ್ಲಿ ಮಂಡಿಸಲಾಗಿದೆ. ಅವರು ಭೇಟಿಯಾದ ಸಾಮಾನ್ಯ ವ್ಯಕ್ತಿಗಳಿಂದ ಅಸಾಮಾನ್ಯ ಸಂತರು, ವಾಮಾಚಾರಿಗಳವರೆಗೆ ಕೃತಿ ಅನನ್ಯವಾದ ವಿವರಗಳನ್ನು ಹೊಂದಿದೆ. ಸತ್ಯಕಾಮರೇ ಘಟನೆಗಳನ್ನು ಖುದ್ದು ನಿರೂಪಿಸುತ್ತಿದ್ದಾರೆ ಎಂದೂ ಭಾಸವಾಗುವಷ್ಟರ ಮಟ್ಟಿಗೆ ಕೃತಿ ಅವರನ್ನು ಸಮೀಪದಿಂದ ಕಂಡಿದೆ. ಸತ್ಯಕಾಮರ ಸಾಹಿತ್ಯದ ಬಗ್ಗೆ ಆಸಕ್ತಿ ಉಳ್ಳವರಿಗೆ ಸ್ವತಃ ಅವರನ್ನು ಅರಿಯಲು ಪುಸ್ತಕ ಉತ್ತಮ ಸಾಧನ.
©2024 Book Brahma Private Limited.