ಬೀಳಗಿ ಮನೆತನದ ಮೂಲ ರಾಜಧಾನಿ ಉತ್ತರ ಕನ್ನಡ ಜಿಲ್ಲೆಯ ಐಸೂರು. ೧೪೬೦ರಲ್ಲಿ ಅದು ಉತ್ತರ ಕರ್ನಾಟಕದ ಬಿಳಗಿಗೆ ಸ್ಥಳಾಂತವಾಯಿತು. ಮೊದಲು ಜೈನಮತಸ್ಥರಾಗಿದ್ದು ನಂತರ ಶೈವ ವೀರಶೈವ ಮತಸ್ಥರಾಗಿದ್ದನ್ನು ಈ ಮನೆತನದ ವ್ಯಕ್ತಿನಾಮಗಳಿಂದ ಅರಿಯಬಹುದು. ಈ ರಾಜಮನೆತನ ಸಾಹಿತ್ಯ, ವ್ಯವಸಾಯ, ವಾಣಿಜ್ಯ, ಧರ್ಮ ವಾಸ್ತು-ಶಿಲ್ಪಕಲೆ ಮುಂತಾದ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳ ಉಲ್ಲೇಖ ಕೃತಿಯಲ್ಲಿದೆ.
ಬಿಳಗಿ ಅರಸುಮನೆತ ಕುರಿತು ಬೆಳಗಾವಿ ನಾಗನೂರು ರುದ್ರಾಕ್ಷಿಮಠ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಹದಿನಾಲ್ಕು ವಿದ್ವಾಂಸರು ಮಂಡಿಸಿದ ವಿದ್ವತ್ಪೂರ್ಣ ಪ್ರಬಂಧಗಳ ಕೃತಿ ಇದು. ಡಾ.ಎಂ.ಎಂ.ಕಲಬುರ್ಗಿ ಹಾಗೂ ಡಾ. ಎಚ್.ಆರ್. ರಘುನಾಥ ಭಟ್ ವಿಚಾರ ಸಂಕಿರಣದ ನೇತೃತ್ವ ವಹಿಸಿದ್ದರು.
©2024 Book Brahma Private Limited.