”ಗುಲಬರ್ಗಾ ಜಿಲ್ಲೆಯ ಜೈನ ಪರಂಪರೆ’ ಕೃತಿಯ ಲೇಖಕರು ಡಿ.ಎನ್. ಅಕ್ಕಿ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗವು ತಮ್ಮ ಮಂಟಪ ಮಾಲೆ ಸರಣಿಯಡಿ (ಸಂಖ್ಯೆ: 246) ಪ್ರಕಟಿಸಿದೆ. ಗುಲಬರ್ಗಾ ಜಿಲ್ಲೆಯ ಜೈನ ಶಾಸನಗಳು, ಬಸದಿಗಳು, ಜೈನ ಜನಪದ, ಜೈನ ಅಡುಗೆ, ಮದುವೆ-ಮುಂಜಿವಿ ಸೇರಿದಂತೆ ಜೈನ ಆಚಾರ-ವಿಚಾರಗಳು, ಜೈನ ವಿದ್ವಾಂಸರು, ಜೈನ ವಾಸ್ತುಶಿಲ್ಪ, ಉತ್ಸವ ಹೀಗೆ ಜೈನ ಧರ್ಮೀಯ ಮಾಹಿತಿ ಒಳಗೊಂಡ ಸಂಶೋಧನಾತ್ಮಕ ಲೇಖನಗಳು ಈ ಕೃತಿ ಒಳಗೊಂಡಿದೆ. ಇಡೀ ಗುಲಬರ್ಗಾ ಜಿಲ್ಲೆಯ ಜೈನ ಧರ್ಮ ಹಾಗೂ ಪರಂಪರೆಯ ಸ್ಥೂಲ ಚಿತ್ರಣ ನೀಡುತ್ತದೆ ಮಾತ್ರವಲ್ಲ; ಈ ನಿಟ್ಟಿನಲ್ಲಿ ಸಂಶೋಧನೆ ಕೈಗೊಳ್ಳಲು ಮೂಲ ಆಕರಗ್ರಂಥವಾಗಿಯೂ ಮಾಹಿತಿ ನೀಡುತ್ತದೆ.
©2024 Book Brahma Private Limited.