ಡಾ. ಸಿದ್ದಲಿಂಗಯ್ಯನವರು ಮೂಲತಃ ಜಾನಪದದ ವಿದ್ಯಾರ್ಥಿ. ಸಂಸ್ಕೃತಿಯ ಅಧ್ಯಯನಕ್ಕೆ ಪೂರಕವಾಗುವಂತೆ ಗ್ರಾಮದೇವತೆಗಳ ಅಧ್ಯಯನವನ್ನು ಕೈಗೆತ್ತಿಕೊಂಡವರಲ್ಲಿ ಸಿದ್ದಲಿಂಗಯ್ಯನವರೇ ಮೊದಲಿಗರು. ಬೆಂಗಳೂರು ವಿಶ್ವ ವಿದ್ಯಾಲಯದ ಪಿ.ಎಚ್.ಡಿ. ಪದವಿ ಪಡೆದುಕೊಂಡಿರುವ ಈ ಅಪರೂಪದ ಕೃತಿ ಹತ್ತಾರು ವರ್ಷಗಳ ಶ್ರಮದಾಯಕ ಕ್ಷೇತ್ರಕಾರ್ಯದಿಂದ ಸಮೃದ್ದವಾದ ಮಾಹಿತಿಯನ್ನು ತುಂಬಿಕೊಂಡಿದೆ. ಗ್ರಾಮದೇವತೆಗಳನ್ನು ಕುರಿತ ಕಥೆ, ದಂತಕಥೆ, ಪುರಾಣ, ಆಚರಣೆಗಳನ್ನು ವಿಶ್ಲೇಷಿಸುವಲ್ಲಿ ಹೊಸ ಬಗೆಯ ದೃಷ್ಟಿಕೋನವಿರುವುದು ಇಲ್ಲಿನ ವಿಶೇಷ ಗ್ರಾಮದೇವತೆಗಳು ಜನಪದರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದುದು ಮಾತ್ರವಲ್ಲದೆ ಸಾಮಾಜಿಕ ಬದುಕನ್ನು ನಿಯಂತ್ರಿಸುವ ಸಾಧನಗಳೂ ಆಗಿದ್ದವೆಂಬುದು ಆರಿವಿಗೆ ಬರುತ್ತದೆ. ಹಾಗೆಯೇ ಗ್ರಾಮದೇವತೆಯ ಸಾಧನಗಳೂ ನಂಬಿಕೆ ಹಳ್ಳಿಹಳ್ಳಿಗಳನ್ನು ತುಂಬಿಕೊಂಡಿರುವ ಮೌಡ್ಯವಲ್ಲ, ಅದು ಒಂದು ಸಮಾಜದ ಚಿಂತನಾ ಕ್ರಮಕ್ಕೆ ಹಿಡಿದ ಕನ್ನಡಿ ಎಂಬುದನ್ನು ಇಲ್ಲಿ ಸಿದ್ಧಪಡಿಸಿ ತೋರಿರುವುದು ಒಂದು ಮಹತ್ವದ ಸಂಗತಿಯಾಗಿದೆ.
ದಲಿತ ಕವಿ ಎಂದು ಗುರುತಿಸಲಾಗುವ ಡಾ. ಸಿದ್ಧಲಿಂಗಯ್ಯ ಅವರು ದಲಿತ-ಬಂಡಾಯ ಸಾಹಿತ್ಯ ಚಳುವಳಿಯ ಪ್ರಮುಖ ಕವಿ-ಹೋರಾಟಗಾರ. ಮಾಗಡಿಯಲ್ಲಿ 1954ರ ಫೆಬ್ರುವರಿ 3ರಂದು ಜನಿಸಿದರು. ತಾಯಿ ವೆಂಕಮ್ಮ- ತಂದೆ ದೇವಯ್ಯ. ಬಡತನದಲ್ಲಿಯೇ ಗ್ರಾಮೀಣ ಭಾಗದ ಶಾಲೆಗಳಲ್ಲಿ ತಮ್ಮ ಪ್ರಾರಂಭಿಕ ಶಾಲಾ ವಿದ್ಯಾಭ್ಯಾಸ ಮಾಡಿ ಎಂ.ಎ. ಪದವಿಗಳಿಸಿ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕರಾಗಿ, ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಡಾ. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸಿದ ನಂತರ ಸಿದ್ಧಲಿಂಗಯ್ಯನವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ನಡೆದ ಅಖಿಲ ಕರ್ನಾಟಕ ...
READ MORE