ಅಕ್ಷರ ಜಗತ್ತಿನಲ್ಲಿ ಜಾತ್ರೆ-ದೇವರ ಆಚರಣೆಗಳು ಮಹತ್ವ ಕಳೆದುಕೊಳ್ಳುತ್ತಿವೆ ಎಂದು ಹೇಳುವ ಸಂದರ್ಭದಲ್ಲಿ”ಪರೀಷೆ v/s ಮಾನ್ಯೇವು’ ಕೃತಿ ಅಧ್ಯಯನ ದೃಷ್ಟಿಯಿಂದ ಮಹತ್ವದ್ದಾಗುತ್ತದೆ. ನಾಡಿನ ಬಹುತೇಕ ತಳ ಸಮುದಾಯಗಳು ದೈವಾರಾಧನೆಯನ್ನು ಬಹು ವಿಶಿಷ್ಟವಾಗಿ ಕಾಯ್ದುಕೊಂಡು ಬಂದಿವೆ. ಇವುಗಳಿಗೆ, ಸಮಾಜ ಮಾತ್ರವಲ್ಲ; ಇತಿಹಾಸ, ಪುರಾಣದ ತಳಕು ಇರುವುದನ್ನೂ ಗಮನಿಸಬಹುದು. ಇದರಿಂದ, ತಳ ಸಮುದಾಯಕ್ಕೆ ತನ್ನದೇ ಆದ ವಿಶಿಷ್ಟ ಸಂಸ್ಕೃತಿ -ಸಂಸ್ಕಾರ ಇದೆ ಎಂಬುದು ಸಾಬೀತಾಗುತ್ತದೆ ಎಂಬ ಹೊಳವು ಈ ಕೃತಿ ನೀಡುತ್ತದೆ.
©2024 Book Brahma Private Limited.