ತಮಿಳುನಾಡಿನಲ್ಲಿರುವ ಕನ್ನಡ ಶಾಸನಗಳ ಸ್ವರೂಪ ಹಾಗೂ ಪರಿಚಯ ಈ ಕೃತಿಯಲ್ಲಿದೆ. ಕನ್ನಡ ಭಾಷಾ ಅಧ್ಯಯನ ಭಾಗವಾಗಿ ರಾಜ್ಯದ ನಾನಾ ಭಾಗಗಳಲ್ಲಿರುವ ಶಾಸನಗಳ ಅಧ್ಯಯನಗಳು ಈಗಾಗಲೇ ನಡೆದಿವೆ. ನಡೆಯುತ್ತಲೂ ಇವೆ. ಇದೇ ನಿಟ್ಟಿನಲ್ಲಿ ಲೇಖಕರು ತಮಿಳುನಾಡಿನಲ್ಲಿರುವ ಕನ್ನಡ ಭಾಷಾ ಶಾಸನಗಳನ್ನು ಅಧ್ಯಯನ ಮಾಡಿ ಅದರ ಕುರಿತು ಬರೆದಿದ್ದಾರೆ.
ಲೇಖಕ ಪಿ.ವಿ. ಕೃಷ್ಣಮೂರ್ತಿ ಅವರು ಮೂಲತಃ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಮಂದೂರು ಗ್ರಾಮದವರು. (ಜನನ 05-01-1951) ತಂದೆ ಜಿ.ಎನ್. ಪಿಳ್ಳಪ್ಪ, ತಾಯಿ ಪಾಪಮ್ಮ. ಸಮಂದೂರು ಹಾಗೂ ಅತ್ತಿಬೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದು, ಮೈಸೂರು ವಿ.ವಿ.ಯಿಂದ ಬಿಎ ಹಾಗೂ ಎಂ.ಎ. ಪದವೀಧರರು. ‘ಬಾಣರಸರ ಶಾಸನಗಳು : ಒಂದು ಅಧ್ಯಯನ’ ವಿಷಯವಾಗಿ ಕನ್ನಡ ವಿ.ವಿ. ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನ ಎನ್.ಜಿ.ಇ.ಎ.ಫ್. ನಲ್ಲಿ ತಾಂತ್ರಿಕ ತರಬೇತಿ ಹಾಗೂ ಬೆಂಗಳೂರಿನ ಎಸ್.ಜೆ.ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದರು. ಎಚ್.ಎ.ಎಲ್.ನ ವೈಮಾಂತರಿಕ್ಷ ವಿಭಾಗದಲ್ಲಿ ಎಂಜಿನಿಯರರಾಗಿ ಸೇವೆ ಸಲ್ಲಿಸಿ, ಈಗ ...
READ MOREತಮಿಳುನಾಡಿನ ಕನ್ನಡ ಶಾಸನಗಳ ಸ್ವರೂಪ, ಪ್ರಸರಣ, ರಾಜಕೀಯ, ಭೌಗೋಳಿಕ, ಸಾಂಸ್ಕೃತಿಕ ಅಧ್ಯಯನ