ಲೋಕಾಯತ ಮತ್ತು ಶೈವ ಭಾಗ -೨ ಕೃತಿಯಲ್ಲಿ ತಂತ್ರದ ಬಗ್ಗೆ ಸಾಕಷ್ಟು ವಿವರಗಳನ್ನು ನೀಡಲಾಗಿದೆ. ತಂತ್ರಗಳು ವೇದವಿರೋಧಿಗಳು. ಮೂಲತಃ ಕೃಷಿ ಪದ್ಧತಿಯೊಂದಿಗೆ ಸಂಬಂಧ ಹೊಂದಿದ್ದ ತಂತ್ರವು ಮುಂದೆ ಹೇಗೆ ಮತ್ತು ಯಾಕೆ ಸಂಬಂಧ ಸಾಧಿಸಿದವು ಎಂಬುದು ಚರ್ಚಿಸಲಾಗಿದೆ.
ಇಂದಿಗೂ ಕರ್ನಾಟಕದ ಅನೇಕ ಜನಪದ ಸಂಪ್ರದಾಯಗಳಲ್ಲಿ ತಾಂತ್ರಿಕ ಅನ್ನಬಹುದಾದ ಅನೇಕ ಅಂಶಗಳು ಮತ್ತು ಅವು ಕೃಷಿಕೇಂದ್ರಿತವಾಗಿರುವ ಬಗ್ಗೆ ತಿಳಿಸುತ್ತವೆ.
ಜನಪದರು ಕೃಷಿಭೂಮಿಯನ್ನು ಸ್ತ್ರೀ ಎಂದು ಭಾವಿಸಿದ್ದಾರೆ. ಸಮಾಜ, ಆದಿಮ ಸಮಾಜಗಳಲ್ಲಿ ತಾಯಿ ಏಕೆ ಮುಖ್ಯಳಾದಳು, ಕೃಷಿ-ತಂತ್ರ-ಮಹಿಳೆ ಭಾಗಗಳಲ್ಲಿ ಈ ಕುರಿತು ವಿವರಗಳನ್ನು ನೀಡಲಾಗಿದೆ.
ದಲಿತ ಹಾಗೂ ಶಾಕ್ತಾಚರಣೆಗಳು, ನಡೆದ ವಾದಗಳನ್ನು ಜನಮುಖಿಯಾಗಿಸುವ ನಿಟ್ಟಿನಲ್ಲಿ ಕೃತಿಯು ಹೊಸ ಆಯಾಮವನ್ನು ಪಡೆದುಕೊಂಡಿದೆ. ವಿಸ್ತಾರವಾದ ಓದು, ತರ್ಕಬದ್ಧ ವಾದಮಂಡನೆ, ವರ್ತಮಾನದ ಜಾನಪದ ಮಾಹಿತಿಗಳನ್ನು ಪರಂಪರೆಗೆ ಜೋಡಿಸಿ ಹೊಸ ಅರ್ಥ ಹೊರಡಿಸುವ ವಿಧಾನ-ಇವುಗಳಿಂದಾಗಿ ಈ ಕೃತಿಯು ಶಾಕ್ತ ಮತ್ತು ಶೈವ ಪರಂಪರೆಯನ್ನು ಪರಿಚಯಿಸುವಲ್ಲಿ ಪ್ರಮುಖವಾಗಿದೆ.
©2024 Book Brahma Private Limited.