ತಂತ್ರಜ್ಞಾನದ ತ್ವರಿತಗತಿಯ ಅಭಿವೃದ್ಧಿ, ಯಂತ್ರೋಪಕರಣಗಳ ಬಳಕೆಯ ಈ ಕಾಲದಲ್ಲಿ ಮಹಿಳೆಯರು ಸ್ವಾವಲಂಭಿ ಬದುಕು ಕಟ್ಟಿಕೊಂಡಿದ್ದಂತಹ ಗುಡಿ ಹಾಗೂ ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಪುರುಷಾಧಿಪತ್ಯದ ತೋಳ್ಬಲಗಳಿಂದ ಹೊರಬಂದು ಆರ್ಥಿಕ ಸ್ವಾವಲಂಬಿ ಜೀವನ ಕಟ್ಟಿಕೊಳ್ಳುಲು ಸಹಕಾರಿಯಾಗಿದ್ದ ಇಂತಹ ಗುಡಿ ಕೈಗಾರಿಕೆಗಳಲ್ಲಿ ನೇಕಾರಿಕೆಯು ಒಂದು.
ಆದರೆ ವಾಸ್ತವದಲ್ಲಿ ನೇಕಾರಿಕೆ ಇಂದು ಸಂಕಷ್ಟದಲ್ಲಿದೆ. ಅಲ್ಲಿನ ಮಹಿಳೆಯರು ಮೂಲ ವೃತ್ತಿ ತೊರೆದು ಗುಳೆಹೋಗುವ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಈ ಬಿಕ್ಕಟ್ಟಿಗೆ ಮೂಲ ಕಾರಣ ಏನು? ನೇಕಾರಿಕೆಯೊಂದಿಗೆ ಮಹಿಳೆಯರ ಬದುಕು ಹೆಣೆದುಕೊಂಡಿದ್ದೇಗೆ? ವಾಸ್ತವ ಪರಿಸ್ಥಿತಿ ಏನಿದೆ? ಇವೆಲ್ಲದರ ಕುರಿತು ಜಾಜಿ ದೇವೇಂದ್ರಪ್ಪ ಅವರು ವಿವರ ಸಹಿತ ಪ್ರಸ್ತುತ ಪರಿಸ್ಥಿತಿಯನ್ನು ಅಧ್ಯಯನ ಮಾಡಿ ಈ ಕೃತಿಯಲ್ಲಿ ವಿವರಿಸಿದ್ದಾರೆ.
ಜಾಜಿ ದೇವೇಂದ್ರಪ್ಪ ಎಂದೇ ಖ್ಯಾತರಾಗಿರುವ ಕವಿ, ವಿಮರ್ಶಕ ಡಾ.ದೇವೇಂದ್ರಪ್ಪ ಜೆ ಅವರು ಮೂಲತಃ ಬಳ್ಳಾರಿಯವರು. ತಂದೆ ಜಾಜಿ ಚೆನ್ನಬಸಪ್ಪ, ತಾಯಿ ನೀಲಮ್ಮ. ಸದ್ಯ ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಜಾಜಿ ದೇವೇಂದ್ರಪ್ಪನವರು, ಸಾಹಿತ್ಯದ ಹಲವು ವಿಭಾಗಗಳಲ್ಲಿ ಕೃಷಿ ಮಾಡಿದ್ದಾರೆ. ಗುಲ್ಪರ್ಗ ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಕನ್ನಡದಲ್ಲಿ ಎಂ.ಎ ಪದವಿ ಪಡೆದಿರುವ ಅವರು ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಆಂಧ್ರ- ಕರ್ನಾಟಕ ಗಡಿಭಾಗದ ಸ್ಥಳನಾಮಗಳು ಎಂಬ ವಿಷಯದಡಿ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಸಂಶೋಧನಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೇವೇಂದ್ರಪ್ಪನವರು ಹಳಗನ್ನಡ, ಮಧ್ಯಕಾಲೀನ ಕನ್ನಡ, ...
READ MORE